Webdunia - Bharat's app for daily news and videos

Install App

ಸಾಹಸ ಸಿಂಹ ವಿಷ್ಣುವರ್ಧನ್ ಇದ್ದಿದ್ದರೆ ‘ಇದನ್ನು’ ನೋಡಿ ಎಷ್ಟು ಬೇಸರಪಟ್ಟುಕೊಳ್ಳುತ್ತಿದ್ದರೋ…!

Webdunia
ಬುಧವಾರ, 3 ಜನವರಿ 2018 (09:02 IST)
ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಓದಿದ ಶಾಲೆಗೆ ಇದೀಗ ಬೀಗ ಬಿದ್ದಿದೆ. ಶಿಕ್ಷಕರಿಲ್ಲದೇ ಈ ಶಾಲೆಗೆ ಬೀಗ ಹಾಕುವ ಪರಿಸ್ಥಿತಿ ಬಂದಿದೆ.
 

ಸರ್ಕಾರವೇ ಕಳೆದ 10 ವರ್ಷಗಳಿಂದ ಈ ಶಾಲೆಗೆ ಶಿಕ್ಷಕರನ್ನು ನೇಮಿಸಿಲ್ಲ. ಹೀಗಾಗಿ ಶಾಲೆ ಮುಚ್ಚಬೇಕಾದ ಅನಿವಾರ್ಯತೆ ಬಂದಿದೆ. ವಿಷ್ಣುವರ್ಧನ್, ಹಿರಿಯ ಪೋಷಕ ನಟ ರಮೇಶ್ ಭಟ್ ಸೇರಿದಂತೆ ಇಂದು ಖ್ಯಾತನಾಮರಾಗಿರುವ ಹಲವರು ಓದಿದ ಶಾಲೆಯಿದು.

ಚಾಮರಾಜ ಪೇಟೆಯ 4 ನೇ ಮುಖ್ಯರಸ್ತೆಯಲ್ಲಿರುವ ಮಾಡೆಡಲ್ ಸ್ಕೂಲ್ ಎಜುಕೇಷನ್ ಸೊಸೈಟಿಯ ಪ್ರೌಢಶಾಲೆಯ ದುಃಸ್ಥಿತಿ ಇದು. 6 ರಿಂದ 8 ರವರೆಗೆ ತರಗತಿಗಳಲ್ಲಿ ಸುಮಾರು 80 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಇದೀಗ ಅವರನ್ನೆಲ್ಲಾ ಸಮೀಪದ ಶಾಲೆಗೆ ವರ್ಗಾಯಿಸಲಾಗಿದೆ.

ಕನ್ನಡ ಶಾಲೆಗಳ ಮೇಲೆ ಸರ್ಕಾರವೇ ಈ ರೀತಿ ಉದಾಸೀನ ಧೋರಣೆ ತಾಳುತ್ತಿರುವುದು ವಿಪರ್ಯಾಸ. ಇದೀಗ 1 ರಿಂದ 7 ರವರೆಗೆ ತರಗತಿಗಳಿವೆ. ಮುಂದಿನ ದಿನಗಳಲ್ಲಿ ಅದಕ್ಕೂ ಬೀಗ ಬೀಳಬಹುದು ಎಂದು ಶಾಲಾ ಆಡಳಿತ ಮಂಡಳಿ ಭೀತಿಯಲ್ಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments