ನಗರದ ಕೆಎಫ್ಸಿ ಮಳಿಗೆಯಲ್ಲಿ ಕನ್ನಡ ಹಾಡು ಹಾಕದ ವಿಚಾರದಲ್ಲಿ ಮಹಿಳೆ ಹಾಗೂ ಕೆಎಫ್ಸಿ ಸಿಬ್ಬಂದಿಗಳ ನಡುವೆ ಮಾತುಕತೆ ನಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಬಾರೀ ವೈರಲ್ ಆಗಿದೆ. ಈ ಬೆನ್ನಲ್ಲೇ ಕೆಎಫ್ಸಿ ಈ ಬಗ್ಗೆ ಸ್ಪಷ್ಟನೆ ವಕ್ತಾರರು ನೀಡಿದ್ದು, "ಈ ವಿಡಿಯೋ ಹಳೆಯದ್ದು, ಈಗ ಮತ್ತೊಮ್ಮೆ ಸುದ್ದಿಯಾಗುತ್ತಿದೆ," ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಕೆಎಫ್ಸಿ ಮಳಿಗೆಯಲ್ಲಿ ಮಹಿಳೆಯೊಬ್ಬರು ಕನ್ನಡ ಹಾಡು ಹಾಕದ ಕಾರಣದಿಂದಾಗಿ ಕೆಎಫ್ಸಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಟ್ವಿಟ್ಟರ್ನಲ್ಲಿ #RejectKFC #KFCಕನ್ನಡಬೇಕು ಎಂಬ ಹ್ಯಾಷ್ಟ್ಯಾಗ್ಗಳು ಭಾರೀ ಟ್ರೆಂಡ್ ಆಗಿತ್ತು.