ಧಾರವಾಡ: ಎಚ್ಐವಿ ಬಗ್ಗೆ ಇನ್ನೂ ಜನರಿಗೆ ಸರಿಯಾದ ತಿಳುವಳಿಕೆ ಬಂದಿಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಧಾರವಾಡದ ಗ್ರಾಮವೊಂದರಲ್ಲಿ ಎಚ್‍ಐವಿ ಪೀಡಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಕೆರೆಯನ್ನೇ ಬತ್ತಿಸಿದ ಘಟನೆ ನಡೆದಿದೆ.
ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಶಂಕಿತ ಎಚ್ಐವಿ ಪೀಡಿತ ಮಹಿಳೆಯ ದೇಹ ಗ್ರಾಮದ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಕೆರೆಯ ನೀರು ಬಳಸಿದರೆ ತಮಗೂ ಎಚ್ಐವಿ ಹರಡಬಹುದು ಎಂಬ ಭಯದಿಂದ ಗ್ರಾಮಸ್ಥರು 36 ಎಕರೆಗಳಷ್ಟು ಬೃಹತ್ ವಿಸ್ತೀರ್ಣದ ಕೆರೆಯ ನೀರನ್ನೇ ಖಾಲಿ ಮಾಡಿದ್ದಾರೆ.
ಅಷ್ಟೇ ಅಲ್ಲ, ಈ ಕೆರೆಗೆ ಹೊಸ ನೀರು ಭರ್ತಿ ಮಾಡದೇ ತಾವು ಇದನ್ನು ಬಳಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಎಚ್ಐವಿ ನೀರಿನ ಮೂಲಕ ಹರಡುವುದಿಲ್ಲ ಎಂದು ಎಷ್ಟೇ ಹೇಳಿದರೂ ಗ್ರಾಮಸ್ಥರು ತಮ್ಮ ಪಟ್ಟು ಬಿಡುತ್ತಿಲ್ಲ. ಇದೀಗ ಗ್ರಾಮಸ್ಥರ ಒತ್ತಡಕ್ಕೆ ಮಣಿದು ಅಧಿಕಾರಿಗಳು ತಾತ್ಕಾಲಿಕವಾಗಿ ಜನರ ನೀರಿನ ಅಗತ್ಯಕ್ಕೆ ಕೃಷ್ಣ ಕಾಲುವೆ ನೀರಿನ್ನು ಒದಗಿಸಲು ಸೌಕರ್ಯ ಮಾಡಿಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.