ರಾಜ್ಯವನ್ನ ತೀವ್ರ ಬರ ಆವರಿಸಿದೆ, ಜನ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ, ಬೆಳೆ ಬೆಳೆಯುವುದ ಕನಸಿನ ಮಾತು. ಜಲಾಶಯಗಳೆಲ್ಲ ಬತ್ತಿಹೋಗಿವೆ. ಮಾಡಿದ ಸಾಲ ತೀರಿಸಲಾಗದೆ ಹಲವು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವತ್ತು ಸಿಂಧಗಿ ತಾಲೂಕಿನ ಚಟ್ಟರಕಿ ಗ್ರಾಮದಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗೆ ಶರಣಾದ ರೈತನನ್ನ 43 ವರ್ಷದ ಸಂತೋಷ್ ಎಂದು ಗುರ್ತಿಸಲಾಗಿದೆ. 7 ಎಕರೆ ಜಮೀನಿನಲ್ಲಿ ದಾಳಿಂಬೆ ಮತ್ತು ಕಬ್ಬು ಬೆಳೆದಿದ್ದ ರೈತ ರಾಷ್ಟ್ರೀಕೃತ ಬ್ಯಾಂಕ್`ಗಳಿಂದ 7 ಲಕ್ಷ ಮತ್ತು ಇತರೆಡೆಯಿಂದ 5 ಲಕ್ಷ ಸಾಲ ಮಾಡಿಕೊಂಡಿದ್ದ. ಬೆಳೆ ಕೈಕೊಟ್ಟಿದ್ದರಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಾಡಿಕೊಂಡಿದ್ದ ರೈತ ಸಾಲ ಹೊರೆ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾವಿಗೂ ಮುನ್ ರೈತ ಬರದದಿರುವ ಡೆತ್ ನೋಟ್`ನಲ್ಲಿ ನನ್ನ ಸಾವಿಗೆ ರಾಜ್ಯಸರರ್ಕಾರವೇ ಕಾರಣ ಎಂದು ಬರೆದಿದ್ದಾನೆ ಎಂದು ತಿಳಿದುಬಂದಿದೆ.
ರೈತರ ಸಾಲ ಮನ್ನಾ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮೀನಾಮೇಶ ಏಣಿಸುತ್ತಿವೆ. ರಾಷ್ಟ್ರೀಕೃತ ಬ್ಯಾಂಕ್ ಸಾಲವನ್ನ ಕೇಂದ್ರವೇ ಮನ್ನಾ ಮಾಡಲಿ ಎಂದು ರಾಜ್ಯಸರ್ಕಾರ, ನೀವೇ ಮನ್ನಾ ಮಾಡಿ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದು, ಇವರಿಬ್ಬರ ನಡುವೆ ರೈತ ಮಾತ್ರ ಸಂಕಷ್ಟಕ್ಕೆ ಸಿಲುಕುತ್ತಿದ್ದಾನೆ.