ಯುವಕನೊಬ್ಬ ಯುವತಿಯನ್ನು ಪುಸಲಾಯಿಸಿ ಕರೆದುಕೊಂಡು ಬಂದು ನಡೆಸಿದ ಕಾಮದಾಟದ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಘಟನೆ ನಡೆದಿದೆ.
ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಯುವತಿಯೊಬ್ಬಳನ್ನು ಕರೆದುಕೊಂಡು ಬಂದಿದ್ದ ಸುನೀಲ್ ಎಂಬಾತ ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದನು. ಈ ಸಂದರ್ಭದಲ್ಲಿ ಕಾಮದಾಟವನ್ನು ವಿಡಿಯೋ ಮಾಡಿಕೊಂಡಿದ್ದನು.
ಆ ಬಳಿಕ ವಿಡಿಯೋವನ್ನು ವೈರಲ್ ಮಾಡೋದಾಗಿ ಹೆದರಿಸಿ ಆಗಾಗ್ಗೆ ಯುವತಿಯನ್ನು ಕರೆದು ಅತ್ಯಾಚಾರ ಎಸಗಿದ್ದಾನೆ.
ಕೊನೆಗೆ ಯುವಕನ ಕಾಟದಿಂದ ಬೇಸತ್ತ ಯುವತಿ ಸಂಘಟನೆಯೊಂದರ ಮೊರೆಹೋಗಿದ್ದಾಳೆ. ಆಗ ವಿಷಯ ತಿಳಿದ ಸಂಘಟನೆಯ ಸದಸ್ಯರು ಯುವಕನನ್ನ ಥಳಿಸಿದ್ದು, ಬೆಂಗಳೂರಿನ ರಾಮಮೂರ್ತಿ ನಗರ ಠಾಣೆಗೆ ಒಪ್ಪಿಸಿದ್ದಾರೆ.