ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯಿಲಿ ಮಾಡಿರುವ ಟ್ವೀಟ್ ಒಂದು ತಾನಾಗಿಯೇ ವಿಪಕ್ಷಗಳಿಗೆ ಟೀಕೆಗೆ ರಸದೌತಣ ನೀಡಿದೆ.
ಅಷ್ಟಕ್ಕೂ ಇದು ಕಾಂಗ್ರೆಸ್ ಒಂದೇ ಪಕ್ಷದ ಸಮಸ್ಯೆಯಲ್ಲ. ಎಲ್ಲಾ ಪಕ್ಷಗಳಲ್ಲೂ ನಡೆಯುವಂತಹದ್ದೇ. ಆದರೆ ವೀರಪ್ಪ ಮೊಯಿಲಿ ಟ್ವೀಟ್ ಮಾಡಿ ತಾವೇ ವಿಪಕ್ಷಗಳಿಗೆ ಆಹಾರವಾಗಿದ್ದಾರೆ.
ರಾಜಕಾರಣದಲ್ಲಿ ನಡೆಯುತ್ತಿರುವ ಹಣದ ಪ್ರಾಬಲ್ಯದ ಬಗ್ಗೆ ಕಾಂಗ್ರೆಸ್ ಗಮನಹರಿಸಬೇಕಿದೆ. ಕಾಂಗ್ರೆಸ್ ಗೆ ರಸ್ತೆ ಗುತ್ತಿಗೆದಾರರು ಬೇಕಾಗಿಲ್ಲ. ಲೋಕೋಪಯೋಗಿ ಸಚಿವರು ಇಂತಹವರೊಂದಿಗೆ ನಂಟು ಇಟ್ಟುಕೊಳ್ಳಬಾರದು ಎಂದು ರಾಹುಲ್ ಗಾಂಧಿ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
ಆದರೆ ಇದು ನೈಸ್ ಹಗರಣದ ಕೇಂದ್ರ ಬಿಂದು ಅಶೋಕ್ ಖೇಣಿಯವರ ಸೇರ್ಪಡೆಗೆ ಅಸಮಾಧಾನ ವ್ಯಕ್ತಪಡಿಸಿ ಮೊಯಿಲಿ ಮಾಡಿರುವ ಟ್ವೀಟ್ ಎನ್ನಲಾಗುತ್ತಿದೆ. ಆದರೂ ವಿಪಕ್ಷ ಬಿಜೆಪಿ ಇದು ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿ ಹಣ ವಸೂಲಿ ರಾಜಕಾರಣ ನಡೆಯುತ್ತಿದೆ ಎನ್ನುವುದಕ್ಕೆ ಸಾಕ್ಷಿ ಎಂದು ಟೀಕಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ