ಬೆಂಗಳೂರು: ಕಂಬಳ ಕ್ರೀಡೆ ನಿಷೇಧ ಮತ್ತು ಮಹದಾಯಿ ಯೋಜನೆಯ ಜಾರಿಗೆ ಒತ್ತಾಯಿಸಿ ಫೆಬ್ರವರಿ 18 ರಂದು ಕರ್ನಾಟಕ ಬಂದ್ ಗೆ ಕನ್ನಡ ನಾಡು ಪಕ್ಷದ ನಾಯಕ ವಾಟಾಳ್ ನಾಗರಾಜ್ ಕರೆಕೊಟ್ಟಿದ್ದಾರೆ.
ನಮ್ಮ ರಾಜ್ಯದ ಮೇಲೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಜಲ್ಲಿಕಟ್ಟು ಹಿಂಸಾತ್ಮಕ ಕ್ರೀಡೆಯಾದರೂ, ತಮಿಳರ ಪ್ರತಿಭಟನೆಗೆ ಜಗ್ಗಿದ ಕೇಂದ್ರ ನಿಷೇಧ ತೆರವುಗೊಳಿಸಲು ಮುಂದಾಗಿದೆ. ಆದರೆ ರಾಜ್ಯದಲ್ಲಿ ನಡೆಯುವ ನಮ್ಮ ಸಾಂಸ್ಕೃತಿಕ ಕಲೆಯನ್ನು ಬಿಂಬಿಸುವ ಗ್ರಾಮೀಣ ಕಲೆಯನ್ನು ಉಳಿಸಲು ಕೇಂದ್ರ ಮನಸ್ಸು ಮಾಡುತ್ತಿಲ್ಲ ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಮುಖ್ಯವಾಗಿ ಮಹದಾಯಿ ಯೋಜನೆ ಮತ್ತು ಕಂಬಳ ನಿಷೇಧ ತೆರವು ಮಾಡುವಂತೆ ಒತ್ತಾಯಿಸಿ ರಾಜ್ಯದಲ್ಲಿ ಫೆಬ್ರವರಿ 18 ರಂದು ಬಂಧ್ ಆಚರಿಸಿ ನಮ್ಮ ಪ್ರತಿಭಟನೆ ಸಲ್ಲಿಸುವುದಾಗಿ ವಾಟಾಳ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ