ಭಾರೀ ವಿವಾದಕ್ಕೆ ಕಾರಣವಾಯಿತು, 2022ರ ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯಪುಸ್ತಕ ಪರಿಷ್ಕರಣೆಯ ವಿವಾದಿತ ಪಠ್ಯಗಳನ್ನು ಸರ್ಕಾರ ಹೊಸದಾಗಿ ಪರಿಷ್ಕರಣೆ ಮಾಡಿದೆ. ಸರ್ಕಾರ ಆದೇಶದಂತೆ ಎಂಟು ಪಠ್ಯಗಳನ್ನು ಹೊಸದಾಗಿ ಪರಿಷ್ಕರಣೆ ಮಾಡಿ ಇಲಾಖೆ ವೆಬ್ ಸೈಟ್‌ಗೆ ಅಪ್‌ಲೋಡ್ ಮಾಡಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಆವೃತ್ತಿಯ 59 ಪುಟಗಳ ಪರಿಷ್ಕೃತ ಪಠ್ಯವನ್ನು ಬಿಡುಗಡೆ ಮಾಡಲಾಗಿದೆ. 6,7,9 ನೇ ತರಗತಿಯ ಸಮಾಜ ವಿಜ್ಞಾನದ ಪಠ್ಯಗಳು, 7 ನೇ ತರಗತಿಯ ಕನ್ನಡ ಭಾಷೆಯ ಪದ್ಯ ಮತ್ತು 4 ನೇ ತರಗತಿಯ ಪರಿಸರ ಅಧ್ಯಯನ ಒಂದು ಪಠ್ಯ ಪರಿಷ್ಕರಣೆ ಮಾಡಲಾಗಿದೆ. ನಮ್ಮ ಸಂವಿಧಾನ, ಭಕ್ತಿ ಪಂಥ ಹಾಗೂ ಸೂಫಿ ಪರಂಪರೆ, ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ, ಮೈಸೂರು ಮತ್ತು ಇತರ ಸಂಸ್ಥಾನಗಳು, ಭಾರತದ ಮತ ಪ್ರವರ್ತಕರು, ಕರ್ನಾಟಕ ರಾಜ್ಯ ಏಕೀಕರಣ ಮತ್ತು ಗಡಿ ವಿವಾದಗಳು, ಗೊಂಬೆ ಕಲಿಸುವ ನೀತಿ ಪಠ್ಯಗಳನ್ನು ಪರಿಷ್ಕರಣೆ ಮಾಡಲಾಗಿದೆ. ಶೀಘ್ರವೇ ಶಾಲೆಗಳಿಗೆ ಹೊಸ ಪರಿಷ್ಕರಣೆ ಪಠ್ಯ ರವಾನೆಯಾಗಲಿದೆ. ಹೊಸ ಪರಿಷ್ಕೃತ ಪಠ್ಯವನ್ನೇ ಬೋಧನೆ ಮಾಡುವಂತೆ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.