ಮಂಡ್ಯ : ನಟ ಉಪೇಂದ್ರ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಆವರು,’ ಮಂಡ್ಯ ಅಂದ್ರೆ ಇಂಡಿಯಾ, ಇಂಡಿಯಾ ಅಂದ್ರೆ ಅದು ಮಂಡ್ಯ, ಹೀಗಾಗಿ ಮಂಡ್ಯದಿಂದ ಮೊದಲು ಪ್ರಚಾರ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ.
ಹಾಗೇ ರಾಜಕೀಯ ವ್ಯವಸ್ಥೆ ಕಿತ್ತು ಹಾಕಿ ಎಲ್ಲಾ ಸಂಪೂರ್ಣ ಪ್ರಜಾಕೀಯ ಆಗಬೇಕು. ಸಂಪೂರ್ಣವಾಗಿ ಅಧಿಕಾರವನ್ನು ಪ್ರಜೆಗಳಿಗೆ ನೀಡಬೇಕು. ಹೀಗಾಗಿ ಪ್ರಜೆಗಳ ಸಪೋರ್ಟ್ ನಮಗೆ ಬೇಕು. ಸತ್ಯಾಂಶವನ್ನು ಇಟ್ಟುಕೊಂಡು ಪ್ರಚಾರ ಮಾಡ್ತೀವಿ ಎಂದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.