ಮಾಜಿ ಸಚಿವ ಎಚ್.ವೈ.ಮೇಟಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಐಡಿ ಕ್ಲೀನ್ ಚಿಟ್ ನೀಡಿದೆ. ಇದೀಗ ಮಹಿಳೆ ಆರೋಪಿಸುತ್ತಿರುವ ಹಿಂದೆ ಕಾಣದ ಶಕ್ತಿಗಳ ಕೈವಾಡವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಜಿ ಸಚಿವ ಮೇಟಿ ಪ್ರಕರಣದಲ್ಲಿ ನಿರಪರಾಧಿಯಾಗಿದ್ದಾರೆ ಎಂದು ತನಿಖೆ ನಡೆಸಿದ ಸಿಐಡಿ ತಂಡ ವರದಿ ನೀಡಿದೆ. ಇದೀಗ ಮತ್ತೆ ಮಹಿಳೆ ಮೇಟಿ ವಿರುದ್ಧ ದೂರು ದಾಖಲಿಸಿರುವುದು ನೋಡಿದಲ್ಲಿ ರಾಜಕೀಯ ಕೈವಾಡವಿರುವುದು ಕಂಡು ಬರುತ್ತದೆ ಎಂದು ತಿಳಿಸಿದ್ದಾರೆ.
ಮಾಜಿ ಸಚಿವ ಮೇಟಿ ಸಿಡಿ ಪ್ರಕರಣದಲ್ಲಿರುವ ಸಂತ್ರಸ್ಥ ಮಹಿಳೆ ವಿಜಯಲಕ್ಷ್ಮಿ, ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಿ, ಮೇಟಿಯವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಮೇಟಿ ಬೆಂಬಲಿಗರು ಜೀವ ಬೆದರಿಕೆ ಹಾಕಿದ್ದರಿಂದ ಅವರು ಹತ್ಯೆ ಮಾಡುವ ಮೊದಲೇ ನಾನೇ ಸಾಯಬೇಕು ಎನ್ನುವ ಉದ್ದೇಶದಿಂದ ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ. ಮೇಟಿಯವರನ್ನು ಕೂಡಲೇ ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಸಂತ್ರಸ್ಥ ಮಹಿಳೆ ವಿಜಯಲಕ್ಷ್ಮಿ ಪೊಲೀಸ್ ಮಹಾನಿರ್ದೇಶಕರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.