ಮೈಸೂರಿನ ಶ್ಯಾದನಹಳ್ಳಿಯಲ್ಲಿ ರಾಸಾಯನಿಕ ತ್ಯಾಜ್ಯದ ಸ್ಥಳದಲ್ಲಿ ಬೆಂಕಿ ಹೊತ್ತಿಕೊಮಡು ಬಾಲಕ ಬಲಿಯಾದ ಪ್ರಕರಣದ ಬೆನ್ನಲ್ಲೇ ಸಿಲಿಕಾನ್ ಬೆಂಗಲೂರಿನ ಸಮೀಪವೂ ಇಂಥದ್ದೊಂದು ಅಗ್ನಿಕುಂಡಗಳು ಇರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ.
ವರ್ತೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಬನ್ನೇರುಘಟ್ಟ ಬಳಿ ಅವೈಜ್ಞಾನಿಕ ಕಸವಿಲೇವಾರಿಯಿಂದ ಮೀಥೇನ್ ಅನಿಲ ಹೊರಸೂಸುತ್ತಿದ್ದು, ಕಳೆದೊಂದು ವರ್ಷದಿಂದ ಭೂಮಿಯಲ್ಲಿ ಅಗ್ನಿಜ್ವಾಲೆ ಹೊತ್ತಿ ಉರಿಯುತ್ತಿದೆ.ವರ್ಷದ ಹಿಂದೆ ಇಲ್ಲಿ ಬೆಂಕಿ ಕಾಣಿಸಿಕೊಂಡಾಗ ಅಧಿಕಾರಿಗಳು ಭೇಟಿ ನೀಡಿ ಕಣ್ಣೊರೆಸುವ ತಂತ್ರ ಮಾಡಿದ್ದರು. ಅಂದಿನಿಂದ ಇಲ್ಲಿ ಬೆಂಕಿ ಉರಿಯುತ್ತಲೇ ಇದೆ. ಹೀಗಾಗಿ, 100 ಅಡಿಯಷ್ಟು ಭೂಮಿ ಕುಸಿದಿದೆ.
ಬನ್ನೇರುಘಟ್ಟ ಬಳಿಯ ಲಕ್ಷ್ಮೀಪುರ ಬಳಿ ಅವೈಜ್ಞಾನಿಕ ಕಸ ವಿಲೇವಾರಿಯಿಂದ ಅವಾಂತರ ಸೃಷ್ಟಿಯಾಗಿದ್ದು, ಸ್ಥಳೀಯ ಗ್ರಾಮಸ್ಥರು ಆತಂಕಗೊಂಡಿದ್ದಾರೆ.