ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ದಿಢೀರ್ ಆಗಿ ತಮ್ಮ ಬೆಂಬಲಿಗರ ಸಭೆ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಿಢೀರ್ ಸಭೆ ನಡೆಸಿದ್ದಾರೆ ರೆಬೆಲ್ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ.
ಅಥಣಿ ಮತಕ್ಷೇತ್ರದಲ್ಲಿ ಸದ್ಯ ಡಿ ಸಿ ಎಮ್ ಆಗಿರುವ ಲಕ್ಷ್ಮಣ ಸವದಿ ಅವರ ಟಿಕೆಟ್ ವಿಚಾರ ಹೈ ಕಮಾಂಡ್ ಬಳಿ ಇದೆ. ಇನ್ನುಳಿದಂತೆ ಮೂವತ್ಮೂರು ಸಾವಿರ ಮತಗಳ ಅಂತರದಿಂದ ಸೋತಿರೋ ರಾಜು ಕಾಗೆಗೆ ಟಿಕೆಟ್ ಕೊಡುವಂತೆ ಹೇಳುತ್ತಿರುವದು ಎಷ್ಟು ಸರಿ? ಇಂತಹದ್ದನ್ನು ನಾನು ನಿರೀಕ್ಷಿಸಿರಲಿಲ್ಲ ಎಂದು ಬಿ ಎಸ್ ವೈ ಉಪಚುನಾವಣೆ ಪೂರ್ವ ಭಾವಿ ಸಭೆಯಲ್ಲಿ ಹೇಳಿದ್ದಾರೆ.
ಇದರಿಂದಾಗಿ ಪರೋಕ್ಷವಾಗಿ ಬಿಜೆಪಿ ಸರ್ಕಾರದ ಅಸ್ತಿತ್ವಕ್ಕೆ ಕಾರಣವಾಗಿದ್ದ ಹದಿನೈದು ಜನ ಶಾಸಕರು ಸದ್ಯ ಅತಂತ್ರವಾಗುವ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿಯಿಂದ ಟಿಕೆಟ್ ಸಿಗುವ ನಿರೀಕ್ಷೆ ತಕ್ಕಡಿಯಲ್ಲಿ ವಾಲುತ್ತಿದ್ದು ಅನಿರೀಕ್ಷಿತ ಏಟುಗಳು ಬೀಳುತ್ತಿದ್ದಂತೆ ಮತ್ತೆ ಅನರ್ಹ ಶಾಸಕರ ಎದೆ ಬಡಿತ ಹೆಚ್ಚಾಗಿದೆ.
ಇದರಿಂದಾಗಿ ಅಥಣಿ ಮತಕ್ಷೇತ್ರದಲ್ಲಿ ಸದ್ಯ ಡಿ ಸಿಎಮ್ ಲಕ್ಷ್ಮಣ ಸವದಿಗೆ ಪರ್ಯಾಯವಾಗಿ ಮಹೇಶ್ ಕುಮಠಳ್ಳಿ ಅವರನ್ನು ಅಖಾಡಕ್ಕೆ ಇಳಿಸುವ ಕುರಿತು ಕೂಡ ಗೌಪ್ಯ ಸಭೆ ನಡೆಸಿರೋ ರಮೆಶ್ ಜಾರಕಿಹೊಳಿ, ತಮ್ಮ ಸಹೋದರ ಸತೀಶ್ ಜಾರಕಿಹೊಳಿ ಹಾಗೂ ಸಮ್ಮಿಶ್ರ ಸರ್ಕಾರದ ವಿರುದ್ಧವೂ ಗುಡುಗಿದ್ದಾರೆ.