Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೇಂದ್ರ ರೈಲು ಮಂತ್ರಿ ಸುರೇಶ ಅಂಗಡಿ ಕನ್ನಡ ವಿರೋಧಿ

ಕೇಂದ್ರ ರೈಲು ಮಂತ್ರಿ ಸುರೇಶ ಅಂಗಡಿ ಕನ್ನಡ ವಿರೋಧಿ
ಬೆಳಗಾವಿ , ಬುಧವಾರ, 19 ಜೂನ್ 2019 (15:50 IST)
ಲೋಕಸಭೆಯಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಕನ್ನಡವನ್ನು ಕಡೆಗಣಿಸಿ ಇಂಗ್ಲೀಷಿಗೆ ಮಣೆಹಾಕಿದ ಕೇಂದ್ರ ರೈಲು ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.

ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು  ತೀವ್ರ ಪ್ರತಿಭಟನೆ ನಡೆಸಿ ಸಂಸದ ಸುರೇಶ್ ಅಂಗಡಿಯವರ ಪ್ರತಿಕೃತಿಯನ್ನು ದಹಿಸಿದರು.

ಬೆಳಗಾವಿಯ ಕ್ಲಬ್ ರಸ್ತೆಯಲ್ಲಿ ಧರಣಿ ನಡೆಸಿದ ಕರವೇ ಕಾರ್ಯಕರ್ತರು, ಅಂಗಡಿಯವರ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೇ ಪ್ರತಿಕೃತಿಯನ್ನು ದಹಿಸಿದರು.

ಕರವೇ ಜಿಲ್ಲಾಧ್ಯಕ್ಷ ಮಹಾದೇವ ತಳವಾರ, ಯುವ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ಗಣೇಶ ರೋಖಡೆ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ರು.

ಮೇ 23 ಕ್ಕೆ ಲೋಕಸಭೆಗೆ ನಾಲ್ಕನೇ ಬಾರಿ ಆಯ್ಕೆಗೊಂಡ ಸುರೇಶ ಅಂಗಡಿ ಅವರು ಮೇ 30 ರಂದು ರೈಲು ಖಾತೆಯ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಜೂನ್ 17 ರಂದು ಸಂಸದರಾಗಿ ಇಂಗ್ಲೀಷಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕರ್ನಾಟಕದ 28 ರ ಪೈಕಿ 27 ಸಂಸದರು ಪ್ರಮಾಣ ವಚನ ಸ್ವೀಕರಿಸಿದ್ದು ಈ ಪೈಕಿ ಅಂಗಡಿಯವರೊಬ್ಬರೇ ಇಂಗ್ಲೀಷಿನಲ್ಲಿ ಸ್ವೀಕರಿಸಿದರು.  25 ಸದಸ್ಯರು ಕನ್ನಡದಲ್ಲಿ ಹಾಗೂ ಒಬ್ಬರು ಸಂಸ್ಕೃತದಲ್ಲಿ ಸ್ವೀಕರಿಸಿದ್ದಾರೆ.

ಸುರೇಶ ಅಂಗಡಿಯವರ " ಮರಾಠಿಗರ ಓಲೈಕೆ" ರಾಜಕಾರಣ ಕನ್ನಡ ಸಂಘ ಸಂಸ್ಥೆಗಳ ಆಕ್ರೋಶಕ್ಕೆ ಕಾರಣವಾಗಿದ್ದು,  ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ಕಟು ಟೀಕೆಗಳು ವ್ಯಕ್ತವಾಗಿವೆ.


Share this Story:

Follow Webdunia kannada

ಮುಂದಿನ ಸುದ್ದಿ

'ಕುಮಾರಸ್ವಾಮಿಗೆ ಆ ಚಟ ಇದೆಯಂತೆ'