Webdunia - Bharat's app for daily news and videos

Install App

ಪಾಕ್ ಗೆ ಜೈ ಎಂದ್ರೆ ಪಾಕಿಸ್ತಾನಕ್ಕೆ ಕಳಿಸ್ತೇವೆ ಎಂದ ಕೇಂದ್ರ ಸಚಿವ

Webdunia
ಸೋಮವಾರ, 2 ಮಾರ್ಚ್ 2020 (20:05 IST)
ಕಮ್ಯುನಿಷ್ಟರ ಜನ್ಮವನ್ನು ಕೇಂದ್ರ ಸಚಿವರೊಬ್ಬರು ಜಾಲಾಡಿದ್ದಾರೆ.
ಕಮ್ಯುನಿಷ್ಟರು ಈ ದೇಶದ ಸಮಾನತೆಯನ್ನು ಸಹಿಸದವರು. ಅವರು ಸದಾ ವರ್ಗ ಸಂಘರ್ಷಕ್ಕೆ ಕಾರಣವಾಗವರು ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.

ಬಳ್ಳಾರಿ ನಗರದ ಗಾಂಧಿ ಭವನದಲ್ಲಿ ನಡೆದ ಭಾರತೀಯ ಮಜ್ದೂರ್ ಸಂಘದ ಸಂಸ್ಥಾಪಕ ದತ್ತೋಪಂತ ಠೇಂಗಡಿ ಅವರ ಜನ್ಮ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕಾರ್ಮಿಕ‌ ಕ್ಷೇತ್ರದಲ್ಲಿ ಠೇಂಗಡಿ ಅವರು ಸಾಕಷ್ಟು ಅಧ್ಯಯನ‌ ಮಾಡಿ ಅಂದಿನ ಎಐಟಿಯುಸಿ‌ ಮತ್ತು ಎಟಿಯುಸಿ ನಲ್ಲಿ ಕೆಲಸ ಮಾಡಿ ಅಲ್ಲಿ‌ ಕಾರ್ಮಿಕರ ಹಿತ ಕಾಯಲು ಸಾಧ್ಯವಿಲ್ಲವೆಂದು ರಾಷ್ಟ್ರೀಯ ವಿಚಾರ ಆಧಾರಿತ ಭಾರತೀಯ ಮಜ್ದೂರ್ ಸಂಘ ಕಟ್ಟಿದರು. ದೇಶದ ಉತ್ಪನ್ನದ ಜೊತೆ ಕಾರ್ಮಿಕ‌ರ ಹಿತವೂ ಹೆಚ್ಚಬೇಕು ಎಂದರು.

ದೇಶದಲ್ಲಿ 1942 ರಿಂದ ಸಂಘದ ಜೊತೆ ಠೇಂಗಡಿ ಅವರು ಗುರುತಿಸಿಕೊಂಡರು. ಕೇರಳ ಮತ್ತು ಬಂಗಾಳದಲ್ಲಿ ಸಂಘದ ಕಾರ್ಯ ಮಾಡಿದರು.

ಕಮ್ಯುನಿಸ್ಟ್ ಮತ್ತು ಮತೀಯವಾದ ಮಧ್ಯದಲ್ಲಿ ಭಾರತೀಯ ಮಜ್ದೂರ್ ಸಂಘ ಕಟ್ಟಿದರು. ಅವರ ಕೊಡುಗೆಯೇ ಈ ರಾಜ್ಯಗಳಲ್ಲಿ ನಮ್ಮ ಪಕ್ಷ ನೆಲೆ ಕಂಡುಕೊಳ್ಳಲು ಸಾಧ್ಯವಾಗಿದೆಂದರು.

ಅಂಬೇಡ್ಕರ್ ಅವರ ಸಂಪರ್ಕ‌ ಪಡೆದ ಠೇಂಗಡಿ‌ ಅವರು ಅಂಬೇಡ್ಕರ್ ಅವರ ಉಪ ಚುನಾವಣೆಯಲ್ಲಿ ಗೆಲುವಿಗೆ ಶ್ರಮಿಸಿದರು. ಸಂಘರ್ಷದಿಂದ ಅಲ್ಲ ಸಹಕಾರದಿಂದ ಎಂಬ ತತ್ವದ‌ ಮೇಲೆ ಕಾರ್ಮಿಕರನ್ನು ‌ಸಂಘಟಿಸಿದರು. ದೇಶದ ಹಿತಕ್ಕಾಗಿ ಕೆಲಸ ಮಾಡುವ ಎನ್ನುವುದು ಅವರ ಘೋಷಣೆ ಆಗಿತ್ತು ಎಂದರು.
ನಲವತ್ತು ನಾಲ್ಕು ಕಾರ್ಮಿಕ ಕಾನೂನುಗಳನ್ನು ನಾಲ್ಕು ಕೋಡ್ ಗಳನ್ನಾಗಿ ‌ಪರಿವರ್ತಿಸಿ  ಕಾರ್ಮಿಕರ ಹಿತಕ್ಕೆ ಸಹಕಾರಿಯಾಗಿ ಕೇಂದ್ರ ಸರಕಾರ ಮುಂದಾಗಿದೆ ಎಂದರು.

ಬಹಳಷ್ಟು ಬ್ಯಾಂಕ್ ಗಳು ದಿವಾಳಿಯಾಗುತ್ತಿವೆ. ಅದಕ್ಕಾಗಿ ಬ್ಯಾಂಕ್ ಗಳಲ್ಲಿನ ಠೇವಣಿಗೆ ಒಂದು ಲಕ್ಷದ ವಿಮೆಯನ್ನು ಐದು ಲಕ್ಷ ರೂ.ಗೆ ಹೆಚ್ಚಿಸಿದೆ. ಇದರಿಂದ ಗ್ರಾಹಕರಿಗೆ ಬ್ಯಾಂಕ್ ಗಳ ಮೇಲೆ ವಿಶ್ವಾಸ ಹೆಚ್ಚಿದೆ ಎಂದರು.

ದೇಶದ ಹಿತವನ್ನು ಬಯಸದ ಶಕ್ತಿಗಳು ಸಿಎಎ ವಿರೋಧಿಸುತ್ತಿವೆ. ಸಿಎಎ ಎನ್ ಆರ್ ಸಿ ಕಾಯ್ದೆಗಳನ್ನುಯಾವುದೇ ಕಾರಣಕ್ಕೆ ಹಿಂದಕ್ಕೆ ಪಡೆಯಲ್ಲ. ಪಾಕಿಸ್ತಾನ್  ಗೆ  ಜೈ ಎನ್ನುವವರಿಗೆ  ಪಾಕಿಸ್ತಾನಕ್ಕೆ ಕಳುಹಿಸಲಿದ್ದೇವೆಂದು ಎಚ್ಚರಿಕೆ ನೀಡಿದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments