ಬೆಂಗಳೂರು, ಸೆ.21 : ಡಿಸಿಸಿ ಬ್ಯಾಂಕ್ ಗಳು ಬೇರೆ ಬೇರೆ ಬಡ್ಡಿ ದರ ವಿಧಿಸುತ್ತಿವೆ. ಶೀಘ್ರವೇ 21 ಡಿಸಿಸಿ ಬ್ಯಾಂಕ್ ಗಳ ಸಭೆ ನಡೆಸಿ ಏಕರೂಪ ಬಡ್ಡಿ ದರ ನಿಗದಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಭರವಸೆ ನೀಡಿದರು, ಮರಿತಿಬ್ಬೆಗೌಡ ಜಿಲ್ಲಾ ಸಹಕಾರ ಬ್ಯಾಂಕ್ ಗಳಲ್ಲಿ ಸಾಲ ಪಡೆಯುವ ರೈತರಿಗೆ ಬಡ್ಡಿ ರಿಯಾಯಿತಿ ನೀಡುವ ಸಲುವಾಗಿ ಪ್ರಶ್ನೆ ಕೇಳಿ, ಸಭಾಪತಿ ಅವರು ಉತ್ತರಿಸಬೇಕಿದೆ ಎಂದರು.
Photo Courtesy: Google
ಯಾಕಪ್ಪ ನನಗೆ ಪ್ರಶ್ನೆ ಕೇಳುತ್ತೀಯಾ ಎಂದು ಸಭಾಪತಿ ಅವರು ನಗಾಡಿದರು. ಉತ್ತರದ ಪ್ರತಿಯಲ್ಲಿ ಸಚಿವರು ಯಾರು ಎಂದು ನಮೂದಿಸಿಲ್ಲ, ಅದಕ್ಕೆ ನಿಮಗೆ ಪ್ರಶ್ನೆ ಕೇಳಿದೆ ಎಂದು ಮರಿ ತಿಬ್ಬೆಗೌಡ ಹೇಳಿದರು. ಕೊನೆಯಲ್ಲಿ ಸಚಿವರ ಹೆಸರಿದೆ ನೋಡಿ, ಬರಿ ಇಂತಹ ನ್ಯಾಯಗಳೇ ಆದವು ಎಂದು ಸಭಾಪತಿ ಹೇಳಿದರು.
ನಂತರ ಸದಸ್ಯರು ಕೇಳಿ ಉಪ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕೊಡಗು, ಚಿತ್ರದುರ್ಗ ಮತ್ತು ಬೀದರ್ ನ ಜಿಲ್ಲಾ ಸಹಕಾರ ಬ್ಯಾಂಕ್ ಗಳಿಗೆ ಪಹಣಿ ಕೊಟ್ಟರೆ ರೈತರಿಗೆ ಚಿನ್ನಾಭರಣಾ ಸಾಲದ ಮೇಲೆ ನಿಗದಿತ ಬಡ್ಡಿದರದ ಮೇಲೆ ಶೇ.1ರಷ್ಟು ರಿಯಾಯಿತಿ ನೀಡಲಾಗುತ್ತದೆ. ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿಸಿದರೆ ಇನ್ನೂ ಶೇ.1ರಷ್ಟು ಬಡ್ಡಿ ರಿಯಾಯಿತಿ ನೀಡಲಾಗುತ್ತದೆ ಎಂದರು.