ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರೋರು ಸ್ಪೀಕರ್ ಅವರನ್ನು ಭೇಟಿ ಮಾಡುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಹೀಗಾಗಿ ಕೋರ್ಟ್ ಆದೇಶವನ್ನು ಅತೃಪ್ತರು ಪಾಲಿಸಲದಿದ್ದಾರೆ ಅಂತ ಮಾಜಿ ಸಂಸದ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರನ್ನು ಅತೃಪ್ತ ಶಾಸಕರು ಭೇಟಿ ಮಾಡ್ತಾರೆ. ತಮ್ಮ ರಾಜೀನಾಮೆ ಕಾರಣವನ್ನು ಆಯಾ ಶಾಸಕರು ಸ್ಪೀಕರ್ ಗೆ ತಿಳಿಸಲಿದ್ದು, ಮತ್ತಷ್ಟು ವಿವರಣೆ ನೀಡಲಿದ್ದಾರೆ ಅಂತ ಖರ್ಗೆ ಹೇಳಿದ್ರು.
ಅತೃಪ್ತ ಶಾಸಕರು ನೀಡಿರೋ ರಾಜೀನಾಮೆ ಕುರಿತು ವಿಧಾನಸಭೆ ಅಧ್ಯಕ್ಷ ರಮೇಶ್ ಕುಮಾರ್ ಅವರು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ.
ಉಭಯ ಪಕ್ಷಗಳ ಕೆಲವು ಶಾಸಕರು ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆಗೆ ಕಾರಣ ಏನು ಅನ್ನೋದನ್ನು ಸ್ಪೀಕರ್ ರಮೇಶ್ ಕುಮಾರ್ ಈಗಾಗಲೇ ತಿಳಿದುಕೊಂಡಿದ್ದಾರೆ. ಹೀಗಾಗಿ ಈ ಕುರಿತು ಹೆಚ್ಚಿಗೆ ಮಾತನಾಡುವ ಅಗತ್ಯವಿಲ್ಲ ಅಂತ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ರು.