ಬೆಂಗಳೂರು : ಬೈಕ್, ಟಿವಿ, ಫ್ರಿಡ್ಜ್ ಇದ್ರೆ ಬಿಪಿಎಲ್ ಕಾರ್ಡ್ ಇಲ್ಲ ಎಂದ ಉಮೇಶ್ ಕತ್ತಿ ಹೇಳಿಕೆಗೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್ ರೆಡ್ಡಿ ಕತ್ತಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಈ ರೀತಿ ನಿಯಮ ಮಾಡಿದರೆ ತಪ್ಪಾಗುತ್ತೆ. ಸಾಮಾನ್ಯವಾಗಿ ಫ್ರಿಡ್ಜ್, ಟಿವಿ, ಇದ್ದೆ ಇರುತ್ತೆ. ಈಗಿನ ಕಾಲದಲ್ಲಿ ಯಾರ ಬಳಿ ಬೈಕ್ ಇಲ್ಲ ಹೇಳಿ? ಲೋನ್ ಮಾಡಿಯಾದ್ರೂ ಬೈಕ್ ತಗೊಂಡಿರ್ತಾರೆ. ಹಾಗಾಗಿ ಬಿಪಿಎಲ್ ಕಾರ್ಡ್ ರದ್ದು ಮಾಡಿದ್ರೆ ತಪ್ಪಾಗುತ್ತೆ. ಸರ್ಕಾರಿ ಯೋಜನೆ ಜನರಿಗೆ ತಲುಪಿಸಲು ಟಿವಿ ಬೇಕು. ಟಿವಿಯೇ ಇರಬಾರದು ಎಂಬುದನ್ನ ವಿರೋಧಿಸ್ತೇನೆ ಎಂದು ಹೇಳಿದ್ದಾರೆ.