ಬೆಂಗಳೂರು: ಹದಿನೆಂಟು ವರ್ಷದ ಹಿಂದೆ ಬೆಂಗಳೂರು ಮಹಿಳೆಯೋರ್ವಳ ಮೇಲೆ ಅತ್ಯಾಚಾರ ಎಸಗಿ, ಆಕೆಯ ಹತ್ಯೆಗೆ ಕಾರಣವಾಗಿದ್ದ ಉಮೇಶ ರೆಡ್ಡಿ ಜೈಲಿನ ಕೋಣೆಯಲ್ಲಿ ಬೆತ್ತಲೆ ತಿರುಗುತ್ತಿದ್ದ ಎನ್ನುವ ಅಂಶ ಬೆಳಕಿಗೆ ಬಂದಿದೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಉಮೇಶ ರೆಡ್ಡಿಯನ್ನು 1998ರ ಮಾರ್ಚ್ 2ರಂದು ಬಂಧನ ಮಾಡಿ, ವಿಚಾರಣೆಗೊಳಪಡಿಸಲಾಗಿತ್ತು. ಎಂಟು ವರ್ಷಗಳ ಕಾಲ ನಡೆದ ವಾದ-ವಿವಾದದ ನಂತರ 2006ರಂದು ನ್ಯಾಯಾಲಯ, ಆತ ತಪ್ಪಿತಸ್ಥನೆಂದು ಗಲ್ಲು ಶಿಕ್ಷಗೆ ಆದೇಶಿಸಿತ್ತು. ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. 2009ರಲ್ಲಿ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸುಪ್ರಿಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದ. 2011ರಲ್ಲಿ ಕೋರ್ಟ್ ಅದನ್ನು ವಜಾ ಮಾಡಿದ ನಂತರ, ಆತನ ತಾಯಿ ಗೌರಮ್ಮ 2013ರಲ್ಲಿ ಕ್ಷಮಾದಾನ ಅರ್ಜಿ ಸಲ್ಲಿಸುತ್ತಾಳೆ. ಅದು ಕೂಡಾ ರಾಷ್ಟ್ರಪತಿಗಳಿಂದ ತಿರಸ್ಕೃತಗೊಳ್ಳುತ್ತವೆ. ನಂತರ ರೆಡ್ಡಿ ಕೋರ್ಟ್ ಗೆ ಸಲ್ಲಿಸುರುವ ಮರು ಪರಿಶೀಲನಾ ಅಜಿಯೂ ವಜಾಗೊಂಡು, ಗಲ್ಲು ಕಾಯಂ ಆಗುತ್ತದೆ.
ಹೀಗೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಉಮೇಶ ರೆಡ್ಡಿ ಜೈಲಿನಲ್ಲಿ ಹೇಗಿರುತ್ತಿದ್ದ ಎನ್ನುವ ಮಾಹಿತಿಯನ್ನು ಈತನ ಪರ ವಾದ ಮಂಡಿಸಿರುವ ವಕೀಲರು ಅರ್ಜಿಯಲ್ಲಿ ನಮೂದಿಸಿದ್ದಾರೆ. ಸರಿ ಸುಮಾರು ಹತ್ತು ವರ್ಷಗಳಿಂದ ಉಮೇಶ ರೆಡ್ಡಿ ಸೂರ್ಯನ ಬೆಳಕನ್ನೇ ನೋಡಿಲ್ಲ. ಜೈಲಿನ ಕೋಣೆಯಲ್ಲಿ ಈತನ್ನು ಏಕಾಂಗಿಯಾಗಿ ಇರಿಸಲಾಗಿದೆ. ಎಷ್ಟೋ ಬಾರಿ ರೆಡ್ಡಿ ಕೋಣೆಯಲ್ಲಿರುವ ಶೌಚಾಲಯದಲ್ಲಿಯೇ ಮಲಗಿದ್ದಾನೆ. ಮಾನಸಿಕ ಅಸ್ವಸ್ಥನಾಗಿರುವ ರೆಡ್ಡಿ ತಲೆಯನ್ನು ಗೋಡೆಗೆ ಬಡಿಕೊಳ್ಳುತ್ತಿದ್ದ. ಆತನ ಕೋಣೆಯನ್ನು ಇತರ ಕೈದಿಗಳು ಸ್ವಚ್ಛ ಮಾಡುತ್ತಾರೆ. ದಿನದ 23 ಗಂಟೆಯನ್ನು ಕೋಣೆಯಲ್ಲಿಯೇ ಬಂಧಿಸಿಡಲಾಗುತ್ತಿದೆ. ಕತ್ತಲ ಕೋಣೆಯಲ್ಲಿ ಬೆತ್ತಲೆಯಾಗಿ ತಿರುಗುತ್ತಿದ್ದ ಎನ್ನುವ ಆತನ ದಿನಚರಿಗಳ ವಿಕ್ಷಿಪ್ತ ಅಂಶವನ್ನು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ನಡುವೆ ಹೈ ಕೋರ್ಟ್ ನಲ್ಲಿ ಸಲ್ಲಿಸಲಾಗಿರುವ ರಿಟ್ ಅರ್ಜಿ ವಿಚಾರಣೆಯಲ್ಲಿ, ರೆಡ್ಡಿ ಗಲ್ಲು ಶಿಕ್ಷೆ ಜಾರಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.