ಬೆಂಗಳೂರು: 6 ಕಿ.ಮೀ. ದೂರದ ಪ್ರಯಾಣಕ್ಕೆ ಸಾಮಾನ್ಯವಾಗಿ ಎಷ್ಟು ಬಿಲ್ ಮಾಡಬಹುದು. ಆದರೆ ಮೈಸೂರಿನ ಟೆಕಿಗೆ ಉಬರ್ ಟ್ಯಾಕ್ಸಿ ನೀಡಿದ ಬಿಲ್ ಮೊತ್ತ ನೋಡಿದರೆ ಆತ ತಲೆ ತಿರುಗಿ ಬೀಳುವುದೊಂದು ಬಾಕಿ.
ಬೆಂಗಳೂರಿಗೆ ಕಾರ್ಯ ನಿಮಿತ್ತ ಬಂದಿದ್ದ ಸಾಫ್ಟ್ ವೇರ್ ಉದ್ಯೋಗಿ ಪ್ರವೀಣ್ ಸಿಟಿ ರೈಲ್ವೇ ಸ್ಟೇಷನ್ ನಿಂದ, ಸ್ಯಾಟ್ ಲೈಟ್ ಬಸ್ ನಿಲ್ದಾಣದವರೆಗೆ ಪ್ರಯಾಣ ಮಾಡಲು ಉಬರ್ ಕ್ಯಾಬ್ ಬುಕ್ ಮಾಡಿದ್ದರು. 6 ಕಿ.ಮೀ. ಗಳ ಅಂತರ ಕ್ರಮಿಸಿದ ಮೇಲೆ ಪ್ರವೀಣ್ ಗೆ ಉಬರ್ ನೀಡಿದ ಬಿಲ್ ನ ಮೊತ್ತ 5,352 ರೂ.!
ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ವಿಮಾನದಲ್ಲಿ ಪ್ರಯಾಣಿಸಿದರೂ ಇಷ್ಟು ದೊಡ್ಡ ಮೊತ್ತ ಬಿಲ್ ಪಾವತಿಸುವುದು ಬೇಡ. ಹಾಗಿರುವಾಗ ಟ್ಯಾಕ್ಸಿ ಬಿಲ್ ನೋಡಿ ಪ್ರವೀಣ್ ಗೆ ಫುಲ್ ಕನ್ ಫ್ಯೂಷನ್. ಈ ಬಗ್ಗೆ ಚಾಲಕನನ್ನು ಕೇಳಿದಾಗ ಇಂದಿನ ಬಿಲ್ 103 ರೂ. ಉಳಿದಿದ್ದು ನಿಮ್ಮ ಹಿಂದಿನ ಪ್ರಯಾಣಗಳ ಬಾಕಿ ಬ್ಯಾಲೆನ್ಸ್’ ಎಂದು ಆತ ಹೇಳಿದ.
ಆದರೆ ಕಳೆದ ಎರಡು ವರ್ಷಗಳಲ್ಲಿ ಉಬರ್ ಕಾರ್ ನಲ್ಲಿ ಸಂಚರಿಸಿದ್ದು ಎರಡೇ ಬಾರಿ. ಆದರೆ ಇಷ್ಟು ದೊಡ್ಡ ಮೊತ್ತದ ಬಿಲ್ ಬರುವ ಯಾವುದೇ ಸಾಧ್ಯತೆ ಇಲ್ಲ. ಕೊನೆಗೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತು. ಅಂತೂ ಅಲ್ಲಿ ಪ್ರವೀಣ್ ಗೆ ಎಷ್ಟು ಮೊತ್ತ ನೀಡಬೇಕೋ ಅಷ್ಟೇ ಮೊತ್ತ ನೀಡುವಂತಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ