ಶುಲ್ಕ ರಹಿತವಾಗಿ ಆಧಾರ್ ಕಾರ್ಡ್ ನವೀಕರಣಕ್ಕೆ ಇನ್ನು ಮೂರು ದಿನ ಮಾತ್ರ ಅವಕಾಶ. ಡಿಸೆಂಬರ್ 14ರವರೆಗೆ ಉಚಿತ ಅಪ್ಡೇಟ್ಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಅವಕಾಶ ಕಲ್ಪಿಸಿದೆ. ಈ ವರೆಗೆ ಆನ್ಲೈನ್ ಆಧಾರ್ ನವೀಕರಣಕ್ಕೆ ರೂ. 50ರ ಸಾಮಾನ್ಯ ಶುಲ್ಕವನ್ನು ನಿಗದಿ ಪಡಿಸಲಾಗಿತ್ತು.
ಈ ಅವಧಿಯಲ್ಲಿ ಆಧಾರ್ ಕಾರ್ಡ್ ನಲ್ಲಿ ತಪ್ಪಾಗಿ ನಮೂದಾಗಿರುವ ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಮುಂತಾದ ವಿವರಗಳನ್ನು ಸರಿಪಡಿಸಿ ನವೀಕರಿಸಬಹುದು. ಡಿಸೆಂಬರ್ 14ರ ಬಳಿಕ ಶುಲ್ಕ ಪಾವತಿಸಿ ಅಪ್ಡೇಟ್ ಮಾಡಿಕೊಳ್ಳಬಹುದು.
ಇದರ ಜೊತೆಗೆ ಮಕ್ಕಳ ಆಧಾರ್ ವಿವರಗಳನ್ನು ನವೀಕರಿಸಲು ಸರ್ಕಾರ ಈಗ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಈ ಮಾರ್ಗಸೂಚಿಗಳ ಪ್ರಕಾರ, 15 ವರ್ಷ ವಯಸ್ಸಾದ ಮಕ್ಕಳ ಆಧಾರ್ ನವೀಕರಣಕ್ಕಾಗಿ ಬಯೋಮೆಟ್ರಿಕ್ಗಳನ್ನು ಒದಗಿಸಬೇಕು. ಎಂದು ಸೂಚಿಸಲಾಗಿದೆ.