ಸ್ವಂತ ಮಗಳ ಭ್ರೂಣ ಹತ್ಯೆ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಸಂಪೂರ್ಣ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೇ ತಪ್ಪು ಮಾಡಿದ್ದರು ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಪ್ರಕರಣದ ಆರೋಪಿಗಳು ಜನತಾ ನ್ಯಾಯಾಲಯದಿಂದ ತಪ್ಪಿಸಿಕೊಳ್ಳಬಹುದು. ಆದರೆ, ದೇವರ ನ್ಯಾಯಾಲಯದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ ಎಂದು ಹೇಳಿದರು.
ಪುತ್ರಿ ನನ್ನ ವಿರುದ್ಧ ಆರೋಪ ಮಾಡಿದ್ದಾಳೆ. ಸ್ವಂತ ಶ್ರೀಕೃಷ್ಣನ ಮೇಲೆಯೇ ಆರೋಪ ಕೇಳಿ ಬಂದಿರಲಿಲ್ಲವೇ. ಆರೋಪ ಪ್ರತ್ಯಾರೋಪಗಳೆಲ್ಲ ಸಹಜ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರತಿಕ್ರಿಯಿಸಿದ್ದಾರೆ.
ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ ಇಬ್ರಾಹಿಂ ಕುಟುಂಬದ ಮೇಲೆ ಸ್ವಂತ ಪುತ್ರಿಯೇ ಭ್ರೂಣ ಹತ್ಯೆಗೈದ ಆರೋಪ ಮಾಡಿದ್ದಾಳೆ.
ಇಬ್ರಾಹಿಂ ಪುತ್ರಿ ಇಫಾ ಮತ್ತು ಅವರ ತಮ್ಮನ ಪುತ್ರ ಸಿ.ಎಂ. ಫೈಸಲ್ 7 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು.
ಈ ಮದುವೆಗೆ ಇಬ್ರಾಹಿಂ ಕುಟುಂಬ ತೀವ್ರ ವಿರೋಧ ವ್ಯಕ್ತ ಪಡಿಸಿತ್ತು. ಇಫಾ ಈಗ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ನಿನ್ನನ್ನು ನೋಡಬೇಕು ಅನ್ನಿಸುತ್ತದೆ ಎಂದು ಹೇಳಿ ಖಾದರ್ ಪತ್ನಿ ಕಳೆದ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಆಕೆಯನ್ನು ಮನೆಗೆ ಕರೆಸಿಕೊಂಡಿದ್ದರು. ಮೊನ್ನೆ ಆಕೆಯ ಪತಿ ತವರುಮನೆಗೆ ಬಿಡಲು ಬಂದಾಗ ಆತನ ಮೇಲೆ ಹಲ್ಲೆ ಕೂಡ ನಡೆದಿತ್ತು.
ಮಂಗಳವಾರ ಮುಂಜಾನೆ ಇಫಾಗೆ ಆಕೆಯ ತಾಯಿ ಹಣ್ಣಿನ ಜ್ಯೂಸ್ ನೀಡಿದ್ದರು. ಬಳಿಕ ಆಕೆಗೆ ಹೊಟ್ಟೆ ನೋವು ಕಂಡುಬಂದಿತ್ತು. ಆಕೆ ಪತಿಗೆ ಫೋನ್ ಕರೆ ಮಾಡಿ ತಕ್ಷಣ ಬರುವಂತೆ ಹೇಳಿದ್ದಾಳೆ. ಆತ ಮೈಸೂರಿನಿಂದ ಬೆಂಗಳೂರಿಗೆ ಬರುವಷ್ಟರಲ್ಲಿ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹಣ ನೀಡಿ ಗರ್ಭಪಾತ ಮಾಡಿಸಿದ್ದಾರೆ ಎಂದು ಇಬ್ರಾಹಿಂ ಸೋದರ ಖಾದರ್ ಆರೋಪಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.