ನಾರಾಯಣ ದುರ್ಗ ಬೆಟ್ಟವು ಸಾಹಸ ಪ್ರಿಯರು ಹಾಗೂ ಚಾರಣಿಗರನ್ನು ಕೈ ಬೀಸಿ ಕರೆಯುತ್ತಿದೆ.
ಮಂಡ್ಯದ ಶೀಳನೆರ ರಾಯಸಮುದ್ರ ಗ್ರಾಮದ ಪಕ್ಕದಲ್ಲಿರುವ ನಾರಾಯಣ ದುರ್ಗ ಬೆಟ್ಟವು ಸಾಹಸಪ್ರಿಯರು ಹಾಗೂ ಚಾರಣಿಗರನ್ನು ಕೈ ಬೀಸಿ ಕರೆಯುತ್ತಿದೆ.
ಮೇಲುಕೋಟೆಯ ಮಾರ್ಗವಾಗಿ 10 ಕಿ.ಮೀ ದೂರದಲ್ಲಿ ನೀತಿ ಮಂಗಲ ಸರ್ಕಲ್ ಗ್ರಾಮವು
ಸಿಗುತ್ತದೆ. ಅಲ್ಲಿಂದ ಬಲಕ್ಕೆ ತಿರುಗಿ ರಾಮಸಮುದ್ರ ಗ್ರಾಮದಿಂದ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಚಾಮುಂಡೇಶ್ವರಿ ಸನ್ನಿಧಾನದಿಂದ 2 ಕಿ.ಮೀ ದುರ್ಗಮ ಅರಣ್ಯದ ಮಾರ್ಗದಲ್ಲಿ ಕಡಿದಾದ ಏಕಶಿಲಾ ಬೆಟ್ಟವನ್ನು ಹತ್ತಿದರೆ ಅದುವೇ ರೋಮಾಂಚನ ಅನುಭವ ನೀಡುತ್ತದೆ.
ಚಾರಣಿಗರ ಸ್ವರ್ಗವೆಂದೇ ಪ್ರಸಿದ್ಧವಾಗಿರುವ ದುರ್ಗಮವಾದ ನಾರಾಯಣದುರ್ಗ ಬೆಟ್ಟವನ್ನು ಹತ್ತಲು ಎಂಟೆದೆ ಬೇಕು.
ಜೀವನದಲ್ಲಿ ಒಮ್ಮೆ ನೋಡಲೇಬೇಕಾದ ಈ ಅಪರಿಚಿತ ಬೆಟ್ಟವು ಪ್ರಕೃತಿಯ ಮಡಿಲಿನಲ್ಲಿದ್ದು, ವನ್ಯಜೀವಿಗಳ ತಾಣವೂ ಹೌದು.