ಬೆಂಗಳೂರು-ಬೆಳ್ಳಂಬೆಳ್ಳಗೆ ಬೈಯಪ್ಪನಹಳ್ಳಿ ಮತ್ತು ಗರುಡಾಚಾರ್ ಪಾಳ್ಯ ನಡುವೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಕೆಲಕಾಲ ಪ್ರಯಾಣಿಕರು ಪರದಾಟ ನಡೆಸಿದ್ರು.ನೇರಳೆ ಮಾರ್ಗದ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು,ನಿಧಾನಗತಿಯಲ್ಲಿ ಮೆಟ್ರೋ ಸಾಗಿದೆ ಹೀಗಾಗಿ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದು,ಮೆಜೆಸ್ಟಿಕ್, ಎಂ.ಜಿ.ರೋಡ್ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ಜನ ಕ್ಯೂ ನಿಂತಿದ್ದಾರೆ.ನಗರದ ಹಲವು ಮೆಟ್ರೋ ಸ್ಟೇಷನ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಟ್ರೈನ್ ಸಿಗದೇ ಆಫೀಸ್ ಗೆ ತೆರಳಲಾಗದೇ ಪ್ರಯಾಣಿಕರು ಪರದಾಟ ನಡೆಸಿದ್ದಾರೆ.
ತಾಂತ್ರಿಕ ದೋಷದಿಂದ ಬೈಯಪ್ಪನಹಳ್ಳಿಯಿಂದ ಗರುಡಾಚಾರ್ಪಾಳ್ಯ ನಡುವೆ ನೇರಳೆ ಮಾರ್ಗದ ರೈಲುಗಳು ನಿಧಾನಗತಿ ಚಾಲಸುತ್ತಿದೆ.ತಾಂತ್ರಿಕ ಸಮಸ್ಯೆಯಿಂದ ರೈಲು ವೇಳಾಪಟ್ಟಿಯಲ್ಲಿ ಅಡಚಣೆ ಉಂಟಾಗಿದ್ದು ಆದಷ್ಟು ಬೇಗ ಸಮಸ್ಯೆ ಪರಿಹರಿಸಲು ತಂಡಗಳು ಕೆಲಸ ಮಾಡುತ್ತಿವೆ.ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ಎಂದ ಬಿ ಎಂ ಆರ್ ಸಿಎಲ್ ತಿಳಿಸಿದೆ.ಕಾರ್ಯಾಚರಣೆಯ ತಂಡವು ನಮ್ಮ ಪ್ರಯಾಣಿಕರ ಅನಾನುಕೂಲತೆಗಳನ್ನು ಕಡಿಮೆ ಮಾಡಲು ಶಾರ್ಟ್ ಲೂಪ್ ಸೇವೆಗಳನ್ನು ಮಾಡುತ್ತಿದೆ.