ರಾತ್ರಿ ಸುರಿದ ಮಳೆಗೆ ರಸ್ತೆಗಳಲ್ಲಿ ಅಡಿಗಟ್ಟಲೆ ನೀರು ನಿಂತು ವಾಹನ ಸವಾರರು ಪರದಾಟ ನಡೆಸಿದ್ದಾರೆ.ಯಶವಂತಪುರ ಮುಖ್ಯ ರಸ್ತೆಗಳು ಕೆರೆಯಂತಾಗಿದೆ.ಗುಂಡಿಗಳಲ್ಲಿ ನೀರು ನಿಂತು ಜನ ಫುಲ್ ಹೈರಾಣಾಗಿದ್ದಾರೆ.ದೊಡ್ಡ ದೊಡ್ಡ ಲಾರಿ ರಸ್ತೆಯಲ್ಲಿ ಸಾಗಲು ಜನರು ಹರಸಾಹಸಪಾಡುತ್ತಿದ್ದಾರೆ.ಆಟೋ ಮತ್ತು ಕಾರು ಚಾಲಕರು ತಮ್ಮ ವಾಹನಗಳನ್ನು ತಳ್ಳಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.ನಗರದ ವಿವಿಧೆಡೆ ಗುಂಡಿಗಳಲ್ಲಿನೀರು ನಿಂತ ಪರಿಣಾಮ ಕಾರು, ದ್ವಿಚಕ್ರ ವಾಹನಗಳಿಂದ ಟ್ರಾಫಿಕ್ ಜಾಮ್ ಆಗಿದೆ.
ರಾತ್ರಿ ಸುರಿದ ಮಳೆಗೆ ಸಹಕಾರ ನಗರದ ಜೆ.ಬ್ಲಾಕ್ ನ ಮನೆಗಳಿಗೆ ನೀರು ನುಗ್ಗಿದೆಸಹಕಾರ ನಗರದ ಬಿಗ್ ಮಾರ್ಕೇಟ್ ಹಿಂಭಾಗದ ಮನೆಗಳಿಗೆ ಚರಂಡಿ ನೀರು ನುಗ್ಗಿದ್ದು,ಬೆಳಗ್ಗೆಯಾದರೂ ಮಳೆ ನೀರು ನಿವಾಸಿಗಳು ಹೊರ ಹಾಕ್ತಿದ್ದಾರೆ.ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ಡ್ರೈನೇಜ್ ನೀರು ನುಗ್ಗಿದೆ.ನೀರು ಹೊರಹಾಕಲು ರಾತ್ರಿಯಿಡಿ ನಿವಾಸಿಗಳು ಜಾಗರಣೆ ಮಾಡಿದ್ದಾರೆ.ಸಂಪ್ ಗಳಿಗೂ ಡ್ರೈನೇಜ್ ನೀರು ಸೇರಿದೆ.ಸಂಪ್ ಗಳಿಂದ ನಿವಾಸಿಗಳು ನೀರು ಹೊರಹಾಕ್ತಿದ್ದಾರೆ.ಮೋಟರ್ ಹಾಕಿ ಸಂಪ್ ನಿಂದ ನಿವಾಸಿಗಳು ನೀರು ಹೊರಹಾಕ್ತಿದ್ದಾರೆ.
ಕೇವಲ 10 ನಿಮಿಷ ಮಳೆ ಬಂದರೆ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗುತ್ತೆ.ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯ ನಿವಾಸಿಗಳ ಆಕ್ರೋಶ ಹೊರಹಾಕಿದ್ದಾರೆ.ಕಚೇರಿ, ಕ್ಲಿನಿಕ್, ಮನೆಗಳಿಗೆ ನೀರು ನುಗ್ಗಿ ಅವಾಂತರವಾಗಿದ್ದು,ರಸ್ತೆಯಲ್ಲಿ ಕೆಸರು ತುಂಬಿ ಒಡಾಡಲು ಆಗದ ಪರಿಸ್ಥಿತಿ ನಿವಾಸಿಗಳಿಗೆ ಉಂಟಾಗಿದೆ.