Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಯಡಿಯೂರಪ್ಪಗೆ ಭರ್ಜರಿಯಾಗಿ ತಿವಿದ ಉಮೇಶ್ ಕತ್ತಿ - ಪ್ರತ್ಯೇಕ ರಾಜ್ಯದ ಕೂಗು ಮತ್ತೆ ಶುರು

ಯಡಿಯೂರಪ್ಪಗೆ ಭರ್ಜರಿಯಾಗಿ ತಿವಿದ ಉಮೇಶ್ ಕತ್ತಿ - ಪ್ರತ್ಯೇಕ ರಾಜ್ಯದ ಕೂಗು ಮತ್ತೆ ಶುರು
ಚಿಕ್ಕೋಡಿ , ಶುಕ್ರವಾರ, 18 ಅಕ್ಟೋಬರ್ 2019 (20:08 IST)
ರಾಜ್ಯದ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಶಾಸಕ ಕತ್ತಿ ಮತ್ತೆ ಭರ್ಜರಿಯಾಗಿ ತಿವಿದಿದ್ದಾರೆ.

ಯಡಿಯೂರಪ್ಪ, ಪ್ರಧಾನ ಮಂತ್ರಿ ಮೋದಿಯವರು  ಕೃಷ್ಣಾ ಬಗ್ಗೆ ಚಿಂತನೆ ಮಾಡಬೇಕು. ದೇಶದಲ್ಲಿ, ರಾಜ್ಯದಲ್ಲಿ ಒಂದೇ ಸರ್ಕಾರ, ಅದು ಕರ್ನಾಟಕದ ಬಿಜೆಪಿ ಸರ್ಕಾರ. ಹಾಗಾಗಿ ನೀರಾವರಿ ಯೋಜನೆಗಳಿಗೆ ಇವರಿಬ್ಬರೂ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ ಶಾಸಕ ಕತ್ತಿ.

ಇಲ್ಲದೇ ಹೋದಲ್ಲಿ ಉತ್ತರ ಕರ್ನಾಟಕ ಜನರು ದಕ್ಷಿಣ ಕರ್ನಾಟಕಕ್ಕಿಂತ ಮತ್ತೆ 10 ವರ್ಷ ಹಿಂದುಳಿಯಲಿದ್ದಾರೆ.  ಮಹಾದಾಯಿ ಯೋಜನೆ ಜಾರಿಯಾದಲ್ಲಿ ಯೋಜನೆ ವ್ಯಾಪ್ತಿಯ ಪ್ರದೇಶ ನಂದನವನವಾಗಲಿದೆ ಅಂತ ಹುಕ್ಕೇರಿ ಬಿಜೆಪಿ ಶಾಸಕ ಉಮೇಶ ಕತ್ತಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಉಮೇಶ್ ಕತ್ತಿ ಹೇಳಿಕೆ ನೀಡಿದ್ದು, ಚುನಾವಣೆ ಬಂದಾಗ ಮಹಾರಾಷ್ಟ್ರಕ್ಕೆ ನೀರು ಬಿಡುತ್ತೇನೆ ಅನ್ನೋದು ಸರಳ. ಬೇಸಿಗೆಯಲ್ಲಿ ಮಹಾರಾಷ್ಟ್ರ ನಮಗೆ ಒಂದು ಹನಿ ನೀರನ್ನೂ ಬಿಟ್ಟಿಲ್ಲ ಅಂತ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆಗೆ ಕತ್ತಿ ಟಾಂಗ್ ನೀಡಿದ್ದಾರೆ.

ಚುನಾವಣೆ ಬಂದಾಗ ಘೋಷಣೆ ಮಾಡೋದನ್ನು ಬಿಟ್ಟು ಬಿಡಿ. ನಿಜವಾಗಿಯೂ ಜನೋಪಯೋಗಿ ಕೆಲಸ ಮಾಡಿ. ಮಹಾರಾಷ್ಟ್ರಕ್ಕೆ ನೀರು ಕೊಡುವ ಯಡಿಯೂರಪ್ಪ ಹೇಳಿಕೆ ಖಂಡಿಸುವೆ ಎಂದಿದ್ದಾರೆ.

ಮಹಾರಾಷ್ಟ್ರದ 3-4 ಜಿಲ್ಲೆಗಳು, ಕರ್ನಾಟಕದ 13 ಜಿಲ್ಲೆಗಳನ್ನು ಸೇರಿ ಪ್ರತ್ಯೇಕ ರಾಜ್ಯ ಘೋಷಣೆ ಮಾಡಬೇಕು ಅಂತ ಒತ್ತಾಯ ಮಾಡಿದ್ರು.

ಯಡಿಯೂರಪ್ಪರ ಕ್ರಮವೂ ಸರಿಯಲ್ಲ, ಮೋದಿ ಕ್ರಮವೂ ಸರಿಯಲ್ಲ. ಕೊಲ್ಹಾಪುರ, ಸಾಂಗ್ಲಿ, ಸೋಲಾಪೂರ ಸೇರಿದಂತೆ ಮಹಾರಾಷ್ಟ್ರದ ಜಿಲ್ಲೆಗಳು ಹಾಗೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ.

ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಇದೆ, ಹಾಗಾಗಿ ಮೂರು ರಾಜ್ಯಗಳ ಸಿಎಂ ಸೇರಿ ಮಹಾದಾಯಿ ಯೋಜನೆ ಜಾರಿಗೊಳಿಸಲು ಒತ್ತಾಯ ಮಾಡಿದ್ರು. ಪ್ರತ್ಯೇಕ ರಾಜ್ಯ ಆದ್ರೆ ನಾನು ಕರ್ನಾಟಕದ ಮುಖ್ಯಮಂತ್ರಿ ಆಗುವೆ.
ಡಿಸಿಎಂ ಆಗುವ ವ್ಯಕ್ತಿತ್ವ ತನ್ನದಲ್ಲ. ಆದ್ರೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗುವೆ ಎಂದಿದ್ದಾರೆ. ಇಲ್ಲದೇ ಹೋದಲ್ಲಿ ಉತ್ತರ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗುವೆ ಎಂದ್ರು.



Share this Story:

Follow Webdunia kannada

ಮುಂದಿನ ಸುದ್ದಿ

‘ಮಹಾರಾಷ್ಟ್ರಕ್ಕೆ ನೀರು : ಸಿಎಂ ನೀಚ ರಾಜಕಾರಣ ಬಿಡಬೇಕು’