ಜೆಡಿಎಸ್ ರಾಜ್ಯಾಧ್ಯಕ್ಷರ ಹುದ್ದೆಗೆ ನಾಳೆ ಚುನಾವಣೆ ನಡೆಯಲಿದೆ. ಬೇರೆಯವರು ಜವಾಬ್ದಾರಿ ಹೊರಲು ಸಿದ್ದವಾದರೆ ನನ್ನ ಸಮ್ಮತಿಯಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ರಾಜ್ಯಾಧ್ಯಕ್ಷರ ಚುನಾವಣೆಗೆ ಎಚ್.ಡಿ.ಕುಮಾರಸ್ವಾಮಿಯನ್ನೇ ನಿಲ್ಲಿಸಬೇಕು ಎಂದಿಲ್ಲ. ಬೇರೆಯವರು ಪಕ್ಷದ ಹೊಣೆ ಹೊರಲು ಸಿದ್ದವಾದರೆ ಒಪ್ಪಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಜೆಡಿಎಸ್ ಪಕ್ಷ ಅಪ್ಪ ಮಕ್ಕಳ ಪಕ್ಷವಲ್ಲ. ಪಕ್ಷದ ಹಿತಕ್ಕಾಗಿ ದುಡಿಯಲು ಯಾರೇ ಮುಂದೆ ಬಂದರೂ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಸ್ವೀಕರಿಸಲು ಪಕ್ಷ ಸಿದ್ದವಿದೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಂತೆ ಜೆಡಿಎಸ್ ಪಕ್ಷಕ್ಕೆ ಹೈಕಮಾಂಡ್ ಮೊರೆ ಹೋಗುವ ಅಗತ್ಯವಿಲ್ಲ. ಜೆಡಿಎಸ್ ಜನತೆಯ ಪಕ್ಷವಾಗಿದೆ. ರಾಜ್ಯ ಅಭಿವೃದ್ಧಿ ಪಥಧತ್ತ ಸಾಗಲು ಪ್ರಾದೇಶಿ ಪಕ್ಷಗಳ ಬಲವರ್ಧನೆ ಅಗತ್ಯವಾಗಿದೆ ಎಂದು ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.