ಉಡುಪಿ: ಬಿಲ್ ಪಾವತಿಸಲು ಡೆಬಿಟ್ ಕಾರ್ಡ್ ಬಳಸಿ ಎಂದು ಪ್ರಧಾನಿ ಮೋದಿ ಇತ್ತೀಚೆಗೆ ಡಿಜಿಟಲ್ ಇಂಡಿಯಾದ ಪ್ರಚಾರ ಮಾಡುತ್ತಿದ್ದಾರೆ. ಆದರೆ ಈ ರೀತಿ ಮಾಡಲು ಹೋಗಿ ಇಲ್ಲೊಬ್ಬ ಟೋಲ್ ಅಧಿಕಾರಿ 40 ರೂ. ಬದಲು 40 ಲಕ್ಷ ರೂ. ಸ್ವೈಪ್ ಮಾಡಿದ್ದಾನೆ!
ಇದು ನಡೆದಿದ್ದು, ಮುಂಬೈ-ಕೊಚ್ಚಿ ಹೆದ್ದಾರಿಯಲ್ಲಿ ಉಡುಪಿ ಸಮೀಪದ ಟೋಲ್ ಗೇಟ್ ನಲ್ಲಿ. ವೈದ್ಯರೊಬ್ಬರು 40 ರೂ ಟೋಲ್ ಪಾವತಿಸಲು ಅಧಿಕಾರಿಗಳಿಗೆ ತಮ್ಮ ಡೆಬಿಟ್ ಕಾರ್ಡ್ ನೀಡಿದ್ದಾರೆ. ಆದರೆ ಆ ಭೂಪ 40 ರೂ. ಬದಲು 40 ಲಕ್ಷ ರೂ. ಸ್ವೈಪ್ ಮಾಡಿ ಕೊಟ್ಟಿದ್ದಾನೆ.
ನಂತರ ವೈದ್ಯರಿಗೆ ಟ್ರಾನ್ಸೇಕ್ಷನ್ ಮೆಸೇಜ್ ಬಂದಾಗ ಫುಲ್ ಶಾಕ್! ಟೋಲ್ ಅಧಿಕಾರಿ 40 ರೂ. ಬದಲು 40 ಲಕ್ಷ ರೂ. ಸ್ವೈಪ್ ಮಾಡಿದ್ದು ಗೊತ್ತಾಗಿದೆ. ಇದನ್ನು ಟೋಲ್ ಅಧಿಕಾರಿಗಳ ಗಮನಕ್ಕೆ ತಂದಾಗ ಅವರು ಒಪ್ಪಲಿಲ್ಲ.
ಕೊನೆಗೆ ಬೇರೆ ಉಪಾಯವಿಲ್ಲದೆ ಸ್ಥಳೀಯ ಪೊಲೀಸರಿಗೆ ದೂರು ನೀಡಲಾಯಿತು. ಪೊಲೀಸರು ಬಾಯಿ ಬಿಡಿಸಿದಾಗ ಟೋಲ್ ಅಧಿಕಾರಿ ನಿಜ ಒಪ್ಪಿಕೊಂಡಿದ್ದಾನೆ. ನಂತರ ವೈದ್ಯರಿಗೆ ಹಣ ಮರಳಿಸಲಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ