ರಾಜ್ಯದ ಮಹಿಳಾ ಪೊಲೀಸರಿಗೊಂದು ಸಿಹಿ ಸುದ್ದಿ. ವಿಶೇಷ ಸಂದರ್ಭಗಳಲ್ಲಿ ಬಂದೋಬಸ್ತ್ಗೆ ನಿಯೋಜನೆಗೊಳ್ಳುವ ಮಹಿಳಾ ಪೊಲೀಸ್ ಸಿಬ್ಬಂದಿಗೆ ಅನುಕೂಲವಾಗಲೆಂದು ಶೌಚಗೃಹ ಮತ್ತು ವಿಶ್ರಾಂತಿ ವ್ಯವಸ್ಥೆ ಇರುವ ವಿಶೇಷ ವಾಹನಗಳನ್ನು ಒದಗಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಅತ್ಯಾಧುನಿಕ ಸೌಲಭ್ಯಗಳುಳ್ಳ 102 ಹೊಸ ವಾಹನಗಳನ್ನು ಪೊಲೀಸ್ ಮೀಸಲು ಪಡೆಗೆ ಹಸ್ತಾಂತರಿಸಿ ಗುರುವಾರ ಮಾತನಾಡುತ್ತಿದ್ದ ಅವರು, ರಾಜ್ಯದ ಪೊಲೀಸರು ಬಂದೋಬಸ್ತ್ಗೆ ನಿಯೋಜನೆಗೊಳ್ಳುವ ಸಂದರ್ಭದಲ್ಲಿ ಮಹಿಳಾ ಪೊಲೀಸರು ಕೆಲವೊಮ್ಮೆ ಮೌಲಸೌಕರ್ಯಗಳಿಲ್ಲದೆ ಸಮಸ್ಯೆಯನ್ನು ಎದುರಿಸುತ್ತಾರೆ. ಇಂತವರಿಗಾಗಿ ರಾಜಸ್ಥಾನದಲ್ಲಿರುವಂತೆ ಶೌಚಾಲಯ ಸೌಲಭ್ಯವಿರುವ ಬಸ್ಗಳನ್ನು ಒದಗಿಸಲಾಗುವುದು ಎಂದಿದ್ದಾರೆ.
ಸಾರ್ವಜನಿಕರು ನಿರ್ಭಯವಾಗಿ ಬದುಕುವ ವಾತಾವರಣ ನಿಮ್ಮಿಂದ ನಿರ್ಮಾಣವಾಗಬೇಕು. ಕಾನೂನಿನ ಬಗ್ಗೆ ಗೌರವ ಮತ್ತು ಕಾನೂನು ಉಲ್ಲಂಘಿಸಬಾರದು ಎಂಬ ಕಾಳಜಿ ಪ್ರತಿಯೊಬ್ಬರಲ್ಲೂ ಇದ್ದರೆ ಅಪರಾಧಗಳ ನಿಯಂತ್ರಣ ಸಾಧ್ಯ, ಎಂದು ಇದೇ ಸಂದರ್ಭದಲ್ಲಿ ಸಿಎಂ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ