ಉಡುಪಿ : ಅಷ್ಟಮಠಗಳ ನಾಡು ಉಡುಪಿಯಲ್ಲಿ ಶ್ರೀಕೃಷ್ಣ ಮಠದ ವಾರ್ಷಿಕೋತ್ಸವ ನಡೆಯಿತು.
ಕೃಷ್ಣನ ಪ್ರತಿಷ್ಠಾಪಿಸಿದ ಮಧ್ವಾಚಾರ್ಯರು ಹಗಲಿನಲ್ಲಿ ಒಂದು ಉತ್ಸವವನ್ನು ಮಾಡಿದ್ದರು. ಆ ಪರಂಪರೆ ಇಂದಿಗೂ ಮುಂದುವರೆದಿದ್ದು, ಕೊರೊನಾ ಸಾಂಕ್ರಾಮಿಕದ ನಡುವೆ ಸಾಂಪ್ರದಾಯಕ್ಕೆ ಚ್ಯುತಿ ಬರದಂತೆ ಉತ್ಸವ ನಡೆಸಲಾಯಿತು.
ದೇವಾಲಯಗಳ ನಗರಿ ಉಡುಪಿಯಲ್ಲಿ ಸಂಭ್ರಮದ ಬ್ರಹ್ಮರಥೋತ್ಸವ ನಡೆಯಿತು. ಕೃಷ್ಣ ಮುಖ್ಯಪ್ರಾಣ ದೇವರನ್ನು ರಥದಲ್ಲಿಟ್ಟು ಸಾಂಪ್ರದಾಯಿಕ ಹಗಲು ಉತ್ಸವ ಮಾಡಲಾಯಿತು.
8 ಶತಮಾನದ ಹಿಂದೆ ಆಚಾರ್ಯ ಮಧ್ವರು ಉಡುಪಿ ಕೃಷ್ಣ ಮಠವನ್ನು ಸ್ಥಾಪನೆ ಮಾಡಿದರು. ಸಂಕ್ರಾಂತಿಯಂದು ಕಡೆಗೋಲು ಕೃಷ್ಣನ ಪ್ರತಿಷ್ಠಾಪನೆ ಮಾಡಿದ ಮಾರನೆ ದಿನ ಬೆಳಗ್ಗೆ ಹಗಲು ಉತ್ಸವ ನಡೆಸಿದ್ದಾರೆ. ಈ ಪ್ರತೀತಿ ಇಂದಿಗೂ ನಡೆದುಕೊಂಡು ಬರುತ್ತಿದೆ.