Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿಕೋಟಿನ್‍ಯುಕ್ತ ತಂಬಾಕು ಉತ್ಪನ್ನಗಳ ಪ್ಯಾಕೇಟ್ ನಿಷೇಧ

ನಿಕೋಟಿನ್‍ಯುಕ್ತ ತಂಬಾಕು ಉತ್ಪನ್ನಗಳ ಪ್ಯಾಕೇಟ್ ನಿಷೇಧ
Bangalore , ಗುರುವಾರ, 5 ಜನವರಿ 2017 (10:03 IST)
ಸುಪ್ರೀಂ ಕೋರ್ಟ್ ಆದೇಶದನ್ವಯ ರಾಜ್ಯ ಸರ್ಕಾರವು ಪಾನ್ ಮಸಾಲ ಪ್ಯಾಕೇಟ್‍ಗಳ ಜೊತೆಯಲ್ಲಿ ನೀಡಲಾಗುತ್ತಿದ್ದ ತಂಬಾಕು ಮತ್ತು ನಿಕೋಟಿನ್‍ಯುಕ್ತ ತಂಬಾಕು ಉತ್ಪನ್ನಗಳ ಪ್ಯಾಕೇಟ್‍ಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಈ ನಿಷೇಧದನ್ವಯ ಅಂಕಿತ ಅಧಿಕಾರಿಗಳು ಮತ್ತು ಆಹಾರ ಸುರಕ್ಷತಾಧಿಕಾರಿಗಳು ತಂಬಾಕು ಮತ್ತು ನಿಕೋಟಿನ್‍ಯುಕ್ತ ಪದಾರ್ಥಗಳನ್ನು ಜಿಲ್ಲೆಯಾದ್ಯಂತ ಸಗಟು ಚಿಲ್ಲರೆ ವ್ಯಾಪಾರಿಗಳಲ್ಲಿ ದಾಳಿ ಮಾಡಿ ಅಂದಾಜು 900 ಕ್ಕಿಂತ ಹೆಚ್ಚು ಪ್ಯಾಕೇಟ್‍ಗಳನ್ನು ವಶಪಡಿಸಿಕೊಂಡು ಎಚ್ಚರಿಕೆ ನೀಡಲಾಗಿದೆ. 
 
ಇನ್ನು ಮುಂದೆ ಇವುಗಳನ್ನು ಮಾರಾಟ ಮಾಡಿ ಈ ಕಾಯ್ದೆಯನ್ನು ಉಲ್ಲಂಘಿಸುವವರಿಗೆ ಸಂಬಂಧಿಸಿದ ಆಹಾರ ಸುರಕ್ಷತಾಧಿಕಾರಿಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಕಲಂ 57, 58 ಮತ್ತು 59 ರ ಪ್ರಕಾರ ಕಾನೂನು ಕ್ರಮ ಜರುಗಿಸಬಹುದಾಗಿದು.
 
ಕಲಂ 59 ರ ಉಪ ಕಲಂಗಳನ್ವಯ ಗರಿಷ್ಠ ರು.10 ಲಕ್ಷಗಳ ವರೆಗಿನ ದಂಡ ಮತ್ತು 2 ರಿಂದ 5 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿರುತ್ತದೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿಗಳಾದ ಹೆಚ್.ಎಂ.ಹಡಬಸವೇಗೌಡ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಯುವಕನ ಮೇಲೆ ಕಾಂಗ್ರೆಸ್ ಕಾರ್ಪೋರೇಟರ್ ಹಲ್ಲೆ!