ಕೇಂದ್ರ, ರಾಜ್ಯ ಸರಕಾರಗಳ ವಿರುದ್ಧ ಗುಡುಗಿದ್ದಾರೆ ರೈತರು.
ಚಿಕ್ಕೋಡಿ ಪಟ್ಟಣದ ವೃತ್ತದಲ್ಲಿ ಉರುಳು ಸೇವೆ, ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ರೈತರಿಗೆ ಸರಕಾರಗಳು ಅನ್ಯಾಯ ಮಾಡುತ್ತಿವೆ. ಸರಿಯಾಗಿ ಬೆಳೆ ಪರಿಹಾರ ನೀಡಿಲ್ಲ ಅಂತ ರೈತರು ದೂರಿದ್ದಾರೆ.
ಸಂತ್ರಸ್ಥರಿಗೆ 10 ಸಾವಿರ ರೂಪಾಯಿಗಳ ಚೆಕ್ ತಲುಪಿಲ್ಲ. ಈ ಭಾಗದ ನೀರಾವರಿ ಯೋಜನೆಗಳನ್ನು ಜಾರಿ ಮಾಡದ ಸರಕಾರ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಸಾಲ ಮನ್ನಾ ಮಾಡಬೇಕು. ಹೀಗೆ ವಿವಿಧ
ಬೇಡಿಕೆ ಇಟ್ಟುಕೊಂಡು ಪ್ರತಿಭಟನೆ ನಡೆಸಿದ್ದಾರೆ ರೈತರು.
ಚಿಕ್ಕೋಡಿ ಪಟ್ಟಣದ ಬಸವ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.