ಶಾಸಕರ ಬಲಗೈ ಭಂಟ ಹಾಗೂ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಅಧಿಕಾರಿಗೆ ಅವಾಜ್ ಹಾಕಿದ್ದಾನೆ. ಶಾಸಕರ ಬಲಗೈ ಭಂಟ ಹಾಗೂ ಕೊಪ್ಪಳ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷನೊಬ್ಬ ಅಧಿಕಾರಿಗೆ ಅವಾಜ್ ಹಾಕಿದ್ದಾನೆ.
ಬಿ.ಬಸವರಾಜ ಎಂಬಾಥ ಅಧಿಕಾರಿಗೆ ಅವಾಜ್ ಹಾಕಿರುವ ವ್ಯಕ್ತಿಯಾಗಿದ್ದಾನೆ. ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೆಸುಗೂರು ಆಪ್ತ ಬಿ.ಬಸವರಾಜ ಈಗ ಚರ್ಚೆಗೆ ಗ್ರಾಸವಾಗಿದ್ದಾನೆ. ಕನಕಗಿರಿ ಕ್ಷೇತ್ರದಲ್ಲಿ ನಡೆದಿರುವ ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಗಳನ್ನು ನಿಲ್ಲಿಸುವಂತೆ ಅವಾಜ್ ಹಾಕಿದ್ದಾನೆ. ಸಣ್ಣ ನೀರಾವರಿ ಇಲಾಖೆಯ ಎಇಇ ಸೆಲ್ವಕುಮಾರಗೆ ಪೊನ್ ನಲ್ಲಿ ಅವಾಜ್ ಹಾಕಿದ ಆರೋಪ ಕೇಳಿಬಂದಿದೆ. ಸಣ್ಣ ಹಿಡುವಳಿ ರೈತರಿಗೆ ತುಂಗಭದ್ರ ನದಿಯಿಂದ ನೀರು ಒದಗಿಸುವ ಏತ ನೀರಾವರಿ ಯೋಜನೆ ನಿಲ್ಲಿಸಲು ಅವಾಜ್ ಹಾಕಿದ್ದಾನೆ ಎನ್ನಲಾಗಿದೆ.
ಮಾಜಿ ಸಚಿವ ಶಿವರಾಜ ತಂಗಡಗಿ ಅವಧಿಯಲ್ಲಿ ಕಾಮಗಾರಿ ಆರಂಭವಾಗಿದ್ದು, ಕಾಮಗಾರಿ ಮುಗಿಯುವ ಹಂತದಲ್ಲಿದೆ.
ಏತ ನೀರಾವರಿಯ ಯೋಜನೆಯ ಫಲಾನುಭವಿ ಬದಲಾವಣೆ ಮಾಡವುದಾಗಿ ಬಿ.ಬಸವರಾಜಪ್ಪ ಆವಾಜ್ ಮಾಡಿದ್ದಾನೆ.
ಕೊಪ್ಪಳ ಜಿಲ್ಲೆಯ ಕನಕಗಿರಿ ಮೀಸಲು ವಿಧಾನ ಸಭಾ ಕ್ಷೇತ್ರದ ಹಾಲಿ -ಮಾಜಿ ಶಾಸಕರ ಮಧ್ಯದ ಜಟಾಪಟಿಗೆ ಕಾಮಗಾರಿ ನಿಲ್ಲುವ ಭೀತಿ ಎದುರಾಗಿದೆ.
ಬಿ.ಬಸವರಾಜ ಆವಾಜ್ ಹಾಕಿರುವ ಧ್ವನಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬೆಳಕಿಗೆ ಬಂದಿದೆ.
ಅಧಿಕಾರಿಗೆ ಆವಾಜ್ ಹಾಕಿರುವ ಬಿ.ಬಸವರಾಜ ನಡೆಯನ್ನು ಜನರು ಪ್ರಶ್ನೆ ಮಾಡುತ್ತಿದ್ದಾರೆ.