ನಗರದಲ್ಲಿ 48 ಶಾಲೆಗಳಿಗೆ ಇಮೇಲ್ ಬಂದಿದೆ.ಬಾಂಬ್ ಬೆದರಿಕೆಯ ಇಮೇಲ್ ಬಂದಿದೆ.ಎಲ್ಲಾ ಶಾಲೆಗಳಿಗೂ ಬಾಂಬ್ ಸ್ಕ್ವಾಡ್ ಬೇಟಿ ನೀಡಿ ಪರಿಶೀಲನೆ ಮಾಡಲಾಗಿದೆ.ಇದರ ಹಿಂದಿನ ಹುನ್ನಾರ ಏನು ಅನ್ನೋದರ ತನಿಖೆ ನಡೀತಿದೆ.ಬೀಬಲ್ . ಕಾಮ್ ಡೋಮೈನ್ ಮೂಲಕ ಇಮೇಲ್ ಬಂದಿದೆ.
ಬೇರೆ ದೇಶಗಳಾದ ಮಲೇಷ್ಯಾ ಜರ್ಮಿನಿ ದೇಶಗಳಿಗೆ ಈ ರೀತಿ ಬೆದರಿಕೆ ಬಂದಿರೋದು ಗೊತ್ತಾಗಿದೆ.ಮಾಧ್ಯಮಗಳ ಮೂಲಕ ಈ ವಿಚಾರ ಗೊತ್ತಾಗಿದೆ.ಪೋನ್ ಕಾಲ್ ಮೂಲಕ ಬಂದ ಬೆದರಿಕೆ ಈ ಹಿಂದೆ ಪತ್ತೆ ಮಾಡಿದ್ದಾರೆ.ಆದ್ರೆ ಇಮೇಲ್ ಮೂಲಕ ಬಂದಿರೋದ್ರಿಂದ ಕೊಂಚ ತಡವಾಗುತ್ತೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ.