ರೇಸ್ ಕೊರ್ಸ್ ನಿವಾಸದಲ್ಲಿ ಮಾತನಾಡಿದ ಸಿಎಂ ಬಸಬರಾಜ್ ಬೊಮ್ಮಾಯಿ ಜನವರಿ 17 ಕ್ಕೆ ಕ್ಯಾಬಿನೆಟ್ ಸಭೆ ನಡೆಸಲಿದ್ದೇವೆ.ಬಜೆಟ್ ಅಧಿವೇಶನ ನಡೆಸುವ ದಿನಾಂಕ ನಿಗದಿಗೊಳಿಸುತ್ತೇವೆ ಎಂದು ಹೇಳಿದ್ರು.
ಎಲೆಕ್ಷನ್ ಬಜೆಟ್ ಇರುವುದರಿಂದ ಎಲೆಕ್ಷನ್ ಬಜೆಟ್ ಆಗಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದು,ಇದು ಜನಪರ ಬಜೆಟ್ ಆಗಲಿದೆ.ಕಾಂಗ್ರೆಸ್ ೨೦೦ ಯೂನಿಟ್ ಎಂದು ಘೋಷಣೆ ಮಾಡಿದ್ದಾರೆ.ಎಸ್ಕಾಂಗಳನ್ನು ಸಾಲದಸುಳಿಗೆ ನೂಕಿದ್ದು ಕಾಂಗ್ರೆಸ್.ಎಸ್ಕಾಂ ಮತ್ತು ಪವರ್ ಸೆಂಟರ್‌ಗೆ ಆರ್ಥಿಕ ಸಹಾಯ ಮಾಡಿದ್ದಕ್ಕೆ ಇಂದು ನಿಂತಿದೆ.ಇದು ಕಾಂಗ್ರೆಸ್ ಸರ್ಕಾರದ ಕೊಡುಗೆ.ಅವರಿಗೆ ಗೊತ್ತಿದೆ ಇದು ಯಾವುದು ಕಾರ್ಯರೂಪಕ್ಕೆ ತರೋಕೆ ಆಗಲ್ಲ ಅಂತ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.ಅವ್ರು ಘೋಷಣೆ ಮಾಡಿದ ಯೋಜನೆಗೆ ಹಣದ ಕೊರತೆಯಾಗುತ್ತದೆ ಎಂದು ಸಿಎಂ ಹೇಳಿದ್ರು.
ಬಜೆಟ್ ವಿಷಯವಾಗಿ ಕೇಂದ್ರ ವಿತ್ತ ಸಚಿವರ ಜೊತೆ ಸಭೆ ನಡೆಸಲಾಗಿದೆ.ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಬೆಂಬಲ ನೀರಿಕ್ಷೆ ಮಾಡಿದ್ದೇವೆ.ಕೇಂದ್ರದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬೆಂಬಲ ಸಿಗಲಿದೆ.ಸದಾಶಿವ ಆಯೋಗ,ಕಾಂತರಾಜು ಆಯೋಗ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ.ಹಿಂದುಳಿದ ಆಯೋಗದ ಮಧ್ಯಂತರ ವರದಿಯನ್ನು ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ಪ್ರವರ್ಗ ೨ ,ಕ್ಕೆ ಸೇರಿಸಲು ಹೆಜ್ಜೆ ಇಟ್ಡಿದ್ದೇವೆ.ಹೆಚ್ಚಳ ಮಾಡುವುದಕ್ಕೆ ಸುಪ್ರೀಂ ಕೋರ್ಟ್ ಮತ್ತು ಸಂವಿಧಾನದಲ್ಲಿ ಕೆಲವು ನಿಯಮಗಳಿದೆ.ಅದನ್ನು ಕೂಡ ಆದಷ್ಟು ಬೇಗ ಮಾಡಲಿದ್ದೇವೆ ಎಂದು ಹೇಳಿದ್ದಾರೆ.