ಕಳೆದ ವರ್ಷ ವಾರಕ್ಕೆ ಎರಡು ಬಾರಿ ನೀಡುತ್ತಿದ್ದ ಮೊಟ್ಟೆಯಲ್ಲಿ ಕಡಿತವಾಗಿದೆ.ಬಿಸಿಯೂಟದೊಂದಿಗೆ ಪ್ರತಿ ಮಂಗಳವಾರ, ಶುಕ್ರವಾರ ಮೊಟ್ಟೆ ನೀಡಲಾಗುತ್ತಿತ್ತು.ಈ ವರ್ಷ ವಾರಕ್ಕೊಮ್ಮೆ ಮಾತ್ರ ಮೊಟ್ಟೆ ನೀಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಸುತ್ತೋಲೆ ಹೊರಡಿಸಿದೆ.ಅಪೌಷ್ಟಿಕತೆ, ರಕ್ತಹೀನತೆಯ ನಿವಾರಣೆಗಾಗಿ ಮೊಟ್ಟೆ ನೀಡಲಾಗುತ್ತಿತ್ತು.ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಅಥವಾ ಚಿಕ್ಕಿ ಹಂಚಿಕೆ ಮಾಡಲಾಗ್ತಿತ್ತು.ಕಳೆದ ವರ್ಷ ಯಶಸ್ವಿಯಾಗಿದ್ದ ಮೊಟ್ಟೆ ಹಂಚಿಕೆ ಯೋಜನೆ ಈ ವರ್ಷ ವಾರಕ್ಕೊಂದೇ ಮೊಟ್ಟೆಗೆ ಶಿಕ್ಷಣ ಇಲಾಖೆ ಆದೇಶಿಸಿದೆ.ಪ್ರತಿ ಮೊಟ್ಟೆ 6 ರೂ.ನಂತೆ ದರ ನಿಗದಿಪಡಿಸಿ ಇಲಾಖೆ ಆದೇಶ ಮಾಡಿದೆ.