ಶಿವಮೊಗ್ಗ : ಪ್ರವಾಹ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದಷ್ಟು ಹಣ ನೀಡಲು ಸರ್ಕಾರದಲ್ಲಿ ನೋಟ್ ಪ್ರಿಂಟ್ ಮಾಡುವ ಯಂತ್ರವಿಲ್ಲ ಎಂದು ಸಿಎಂ ಯಡಿಯೂರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದು, ಸಿಎಂ ಈ ಹೇಳಿಕೆ ಇದೀಗ ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದ ಹಲವಡೆ ಪ್ರವಾಹ ಪರಿಸ್ಥಿತಿ ಎದುರಾದ ಹಿನ್ನಲೆಯಲ್ಲಿ ಅಧಿಕಾರಗಳ ಜೊತೆ ನೆರೆ ವಿಚಾರವಾಗಿ ಸಭೆ ನಡೆಸುವಾಗ ಸಿಎಂ, ‘ಪ್ರವಾಹದಿಂದ ಬೆಳೆ ನಾಶವಾಗಿದೆ ಎಂದು ಹೇಳುತ್ತಿದ್ದೀರಿ. ಆದರೆ ನೀರು ಇಳಿದ ಮೇಲೆ ನಾಶವಾಗದೇ ಇರುವ ಬೆಳೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲು ಆಗುವುದಿಲ್ಲ. ಸರ್ಕಾರಕ್ಕೆ ನೋಟ್ ಪ್ರಿಂಟ್ ಮಾಡೋಕೆ ಆಗಲ್ಲ. ಎಷ್ಟು ನಷ್ಟವಾಗಿದೆ ಎನ್ನುವ ಅಂಕಿ ಅಂಶವನ್ನು ಎಚ್ಚರಿಕೆಯಿಂದ ಕೊಡಿ. ಸಮಾಧಾನವಾಗಿ ಒಂದು ವಾರ ಕಾಯಿರಿ, ಬಿಸಿಲು ಬೀಳಲಿ, ನೀರೆಲ್ಲಾ ಕಡಿಮೆಯಾಗಲಿ.
ಆಮೇಲೆ ನಿಮ್ಮ ಲೆಕ್ಕಾಚಾರ ಕೊಡಿ. ಟೇಕ್ ಯುವರ್ ಓನ್ ಟೈಂ. ನಾವೇನು ಅರ್ಜೆಂಟ್ ಮಾಡಲ್ಲ’ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.