ಮೋದಿ ನಾಲ್ಕೈದು ಬಾರಿ ರಾಜ್ಯಕ್ಕೆ ಬಂದ್ರೂ ಯಾವ ಗಾಳಿಯೂ ಬೀಸಲ್ಲ.ಕೋಮುವಾದಿಗಳನ್ನು ಸೋಲಿಸಲು ರಾಷ್ಟ್ರಮಟ್ಟದಲ್ಲಿ ಸೆಕ್ಯೂಲರ್ ಪಾರ್ಟಿ ಒಂದಾಗಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯಸಭೆ ಮೂರನೇ ಸ್ಥಾನಕ್ಕೆ ಯಾವುದೇ ಮೈತ್ರಿ ಇಲ್ಲ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯಸಭೆ ಹಿನ್ನೆಲೆ ಸಂಜೆ ದೆಹಲಿಗೆ ಸಿಎಂ ಸಿದ್ದರಾಮಯ್ಯ ತೆರಳಲಿದ್ದಾರೆ.
ಜೆಡಿಎಸ್ ಜತೆ ಈವರೆಗೂ ಮಾತನಾಡಿಲ್ಲ, ಮಾತನಾಡೋಲ್ಲ. ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಜನರ ಅವಶ್ಯಕತೆ ಇದೆ, ಜೆಡಿಎಸ್ ಅವಶ್ಯಕತೆ ಇಲ್ಲ. ಮೇಘಾಲಯ, ತ್ರಿಪುರ ಚುನಾವಣೆ ಎಫೆಕ್ಟ್ ರಾಜ್ಯದಲ್ಲಿ ಖಂಡಿತ ಆಗಲ್ಲ ಎಂದು ಸಿಎಂ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ದೆಹಲಿಯಿಂದ ತುರ್ತು ಬುಲಾವ್
ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಹೈಕಮಾಂಡ್ ತುರ್ತಾಗಿ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದು, ಇಂದು ಸಂಜೆಯೇ ಸಿಎಂ ದೆಹಲಿಗೆ ತೆರಳಲಿದ್ದಾರೆ.
ಇಂದು ಮತ್ತು ನಾಳೆ ಸಿಎಂ ಸಿದ್ದರಾಮಯ್ಯ ಮೈಸೂರು ಪ್ರವಾಸ ಮಾಡಲು ಕಾರ್ಯಕ್ರಮ ನಿಗದಿಗೊಳಿಸಿದ್ದರು. ನಾಳೆ ಮೈಸೂರಿನಲ್ಲಿ ಪೊಲೀಸ್ಆಯುಕ್ತರ ಕಚೇರಿ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಿಗದಿಯಾಗಿತ್ತು.
ಆದರೆ ಹೈಕಮಾಂಡ್ ತುರ್ತಾಗಿ ಬರಲು ಕರೆ ನೀಡಿರುವುದರಿಂದ ಕಾರ್ಯಕ್ರಮ ರದ್ದುಗೊಳಿಸಿ ಸಿಎಂ ದೆಹಲಿಗೆ ತೆರಳಲಿದ್ದಾರೆ. ನಾಳೆಯ ಕಾರ್ಯಕ್ರಮಗಳು ಮಾರ್ಚ್ 10 ಕ್ಕೆ ಮುಂದೂಡಲಾಗಿದೆ.