ಮೈಸೂರು : ಜೆಡಿಎಸ್ ರಾಜ್ಯ ವೀಕ್ಷಕರ ಪಟ್ಟಿಯಲ್ಲಿ ಹೆಸರಿಲ್ಲದ ವಿಚಾರ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಿಂದ ಹೊರಹಾಕುವುದಾಗಿ ಖುದ್ದು ಹೆಚ್.ಡಿಕೆ ಹೇಳಿದ್ದಾರೆ. ಅಂದ್ರೆ ಎಲ್ಲವೂ ಮುಗಿಯಿತು ಎಂದು ಅರ್ಥ ಅಲ್ಲವೇ? ಜೆಡಿಎಸ್ ವೀಕ್ಷಕರ ಪಟ್ಟಿಯ ಬಗ್ಗೆ ಹೇಳುವುದಕ್ಕೆ ಏನಿದೆ? ಜಿಲ್ಲಾ ಉಸ್ತುವಾರಿ ಸಚಿವರಾಗಿದಾಗಲೇ ಏನೂ ನಡೆಯಲಿಲ್ಲ. ಈಗ ಕೇವಲ ಶಾಸಕ, ನನ್ನ ಮಾತನ್ನು ಯಾರು ಕೇಳುತ್ತಾರೆ. ಎಲ್ಲ ಮೈಸೂರು ಹೈಕಮಾಂಡ್ ಹೇಳಿದಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಮೈಸೂರಿಗೆ ಬರಲಿ. ಇಲ್ಲಿಗೆ ಬಂದು ನನ್ನನ್ನು ಹೊರಹಾಕಲಿ . ಆ ಮೇಲೆ ಏನು ಮಾಡಬೇಕು ಎಂದು ನೋಡಿದ್ರೆ ಆಯ್ತು. ನನ್ನನ್ನು ಜೆಡಿಎಸ್ ಪಕ್ಷದಿಂದ ದೂರ ಮಾಡುವ ಪಿತೂರಿ ಮೊದಲಿನಿಂದಲೂ ನಡೆಯುತ್ತಿದೆ. ನನಗೂ 75 ವರ್ಷ ವಯಸ್ಸಾಯ್ತು, ಈಗ ರಾಜಕಾರಣ ಕಷ್ಟ. ಇನ್ನೆರಡು ವರ್ಷ ನಾನು ಶಾಸಕನಾಗಿ ಇರುತ್ತೇನೆ. ಆಮೇಲೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿರ್ಧರಿಸ್ತೇನೆ ಎಂದು ಅವರು ತಿಳಿಸಿದ್ದಾರೆ.