Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

2000ಕ್ಕೂ ಹೆಚ್ಚು ತೀರ್ಪನ್ನು ಕನ್ನಡದಲ್ಲಿಯೇ ನೀಡಿದ ಮಾದರಿ ನ್ಯಾಯಾಧೀಶ!

2000ಕ್ಕೂ ಹೆಚ್ಚು ತೀರ್ಪನ್ನು ಕನ್ನಡದಲ್ಲಿಯೇ ನೀಡಿದ ಮಾದರಿ ನ್ಯಾಯಾಧೀಶ!
ಬೆಂಗಳೂರು , ಮಂಗಳವಾರ, 1 ನವೆಂಬರ್ 2016 (12:39 IST)

ಬೆಂಗಳೂರು: ವೆಬ್ ದುನಿಯಾ ಓದುಗರಿಗೆ ಕನ್ನಡವರಾಜ್ಯೋತ್ಸವದ ಶುಭಾಶಯಗಳು. ಕರ್ನಾಟಕ ಏಕೀಕರಣವಾಗಿ ಇಂದಿಗೆ ಬರೋಬ್ಬರಿ ಅರವತ್ತು ವರ್ಷ. ಇಷ್ಟೊಂದು ಸುದೀರ್ಘ ಅವಧಿ ಕಳೆದರೂ ಕರ್ನಾಟಕ ನೆಲ, ಜಲ, ಭಾಷೆ ವಿಷಯದಲ್ಲಿ ತೀರಾ ಹಿಂದುಳಿದಿದೆ. ಕನ್ನಡ, ಕನ್ನಡ ಎಂದು ಬೊಬ್ಬಿರಿಯುವವರಿಗೇನೂ ಇಲ್ಲಿ ಕಡಿಮೆಯಿಲ್ಲ. ಹಾಗೆ ಪರಭಾಷಾ ಹಾವಳಿಯೂ ಹೆಚ್ಚಾಗಿಯೂ ಎಲೆಮರೆಯ ಕಾಯಾಗಿ ಕನ್ನಡಕ್ಕಾಗಿ ದುಡಿಯುವವರು ಮಾತ್ರ ತೀರಾ ವಿರಳ. ಅದರಲ್ಲೂ ಪರಭಾಷಾ ಹಾವಳಿ ಹೆಚ್ಚಾಗಿರುವ ಪ್ರಸ್ತುತ ಸಂದರ್ಭದಲ್ಲಿ ಕನ್ನಡಕ್ಕೆ ಎಲ್ಲೂ ಜಾಗವಿಲ್ಲವೇನೋ ಎನ್ನುವ ಆತಂಕ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೇ ಇಲ್ಲೊಬ್ಬ ನಿವೃತ್ತ ನ್ಯಾಯಾಧೀಶರು ತಮ್ಮ ವೃತ್ತಿ ಜೀವನದಲ್ಲಿ ಸರಿಸುಮಾರು 200ಕ್ಕೂ ಹೆಚ್ಚು ತೀರ್ಪನ್ನು ಕನ್ನಡದಲ್ಲಿಯೇ ನೀಡಿ, ಕನ್ನಡದ ಪ್ರೇಮ ಎತ್ತಿ ಹಿಡಿದಿದ್ದಾರೆ.
 


 

ಹೌದು, ಈ ನ್ಯಾಯಾಧೀಶರ ಹೆಸರು ಎಸ್.ಎಚ್. ಮಿಟ್ಟಲಕೋಡ. ಧಾರವಾಡ ನಿವಾಸ. ನ್ಯಾಯಾಲಯದಲ್ಲಿ ಕನ್ನಡ ಭಾಷೆ ಬಳಕೆ ಅಪರೂಪ ಹಾಗೂ ದೂರದ ಮಾತು. ಹೀಗಿದ್ದಾಗಲೂ ಇವರು ಮಿಟ್ಟಲಕೋಡ ಕನ್ನಡದಲ್ಲಿಯೇ ತೀರ್ಪು ನೀಡುತ್ತಿದ್ದರು. ಧಾರವಾಡದವರಾದ ಅವರಿಗೆ ಸಹಜವಾಗಿಯೇ ಸಾಹಿತ್ಯದ ಮೇಲೆ ಪ್ರೀತಿ. ಆ ಪ್ರೀತಿ ಆಂಗ್ಲ ಭಾಷೆಯಲ್ಲಿರುವ ಇಂಡಿಯನ್ ಪಿನಲ್ ಕೋಡ್ ನ್ನು ಕನ್ನಡದಲ್ಲಿ ಅರ್ಥ ಮಾಡಿಕೊಳ್ಳುವಲ್ಲಿಯೂ ಮುಂದುವರಿದಿತ್ತು. ಅಷ್ಟೇ ಆದರೆ ಇವರ ಸಾಧನೆ ಎಲ್ಲರಂತೆಯೇ ಅಂದುಕೊಳ್ಳಬಹುದಿತ್ತು. ಆದರೆ, ಅರ್ಥಮಾಡಿಕೊಂಡ ಕಾಯ್ದೆ-ಕಾನೂನುಗಳನ್ನು ಕನ್ನಡದಲ್ಲಿ ಅವತರಣಿಕೆ ಮಾಡಿ ತೀರ್ಪು ನೀಡುವವರೆಗೂ ಮುಂದುವರಿದಿತ್ತು.

 

ನ್ಯಾಯಾಂಗ ವ್ಯವಸ್ಥೆಯಲ್ಲಿ ಕನ್ನಡ ಬರಬೇಕು. ಅಲ್ಲಿರುವ ಕಾನೂನು ಕಾಯ್ದೆಗಳು ಸುಲಭವಾಗಿ ಶ್ರೀಸಾಮಾನ್ಯನಿಗೂ ಅರ್ಥವಾಗಬೇಕು ಎಂದು ವರು, ವಕೀಲ ಪದವಿ ಪಡೆದ ನಂತರ ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಆಂಗ್ಲ ಭಾಷೆ ಪುಸ್ತಕಗಳನ್ನು ಹಾಗೂ ನ್ಯಾಯಾಂಗದ ಮಾಹಿತಿಯನ್ನು ಕನ್ನಡದಲ್ಲಿ ತರಲು ಪ್ರಯತ್ನಿಸಿದ್ದರು. ಆಂಗ್ಲ ಭಾಷೆ ಬಲ್ಲವರಷ್ಟೇ ನ್ಯಾಯಾಂಗದ ಅರಿವು ಹೊಂದುವುದಕ್ಕಿಂತ ಕನ್ನಡ ಬಲ್ಲವರು ಕೂಡಾ ದರ ಒಳ ಹೊರಗುಗಳನ್ನು ಅರಿಯಬೇಕೆಂದು ನ್ಯಾಯಾಂಗ ಸಾಹಿತ್ಯಕ್ಕೆ ಹೆಚ್ಚು ಮಹತ್ವ ನೀಡಿದ್ದರು. ಕನರ್ಾಟಕದ ನ್ಯಾಯಾಂಗದಲ್ಲೂ ಕನ್ನಡ ಭಾಷೆ ಪ್ರಾಬಲ್ಯ ಹೊಂದಲಿ ಎನ್ನುವ ಕಳಕಳಿ ಮಿಟ್ಟಲಕೋಡ ಅವರದು.


Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ರಾಜ್ಯೋತ್ಸವ: ಶುಭ ಸಂದೇಶ ರವಾನಿಸಿದ ಪ್ರಧಾನಿ ಮೋದಿ