ತನ್ನ ಜತೆಗೆ ಕೆಲಸ ಮಾಡುವ ಯುವತಿಯನ್ನು ಮನೆಗೆ ಕರೆಯಿಸಿದ್ದ ಯುವಕನೊಬ್ಬ ಆಕೆಯ ಬೆತ್ತಲೆ ಫೋಟೋ ತೆಗೆದಿದ್ದಾನೆ.
ನಂಬಿಕೆಯ ಮೇಲೆ ಮನೆಗೆ ಬಂದಿದ್ದ ಸಹೋದ್ಯೋಗಿಯೊಬ್ಬ ತನ್ನ ಜತೆ ಕೆಲಸ ಮಾಡುತ್ತಿದ್ದ ಯುವತಿಯ ಬೆತ್ತಲೆ ಫೋಟೋ ತೆಗೆದಿದ್ದಾನೆ. ಆ ಮೇಲೆ ತನಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ. ಹೀಗಂತ ಆರೋಪಿಸಿರುವ ಯುವತಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಆನಂದ್ ಹಾಗೂ ಯುವತಿ ಆಕ್ಸೆಂಚರ್ ನಲ್ಲಿ ಕೆಲಸ ಮಾಡ್ತಿದ್ದಾರೆ. ಕೆಲ ದಿನಗಳ ಹಿಂದೆ ಮನೆಗೆ ಬಂದಿದ್ದ ಆನಂದ್ ನನ್ನು ಮನೆಯೊಳಗೆ ಕೂರಿಸಿ ಸ್ನಾನಕ್ಕೆ ಯುವತಿ ಹೋಗಿದ್ದಳು. ಆ ವೇಳೆ ಆನಂದ್ ಸ್ನಾನ ಮಾಡುವ ಫೋಟೋ ತೆಗೆದು ಅದನ್ನು ಇಟ್ಟುಕೊಂಡು ನನ್ನ ಮಾತು ಕೇಳದಿದ್ದರೆ ಫೇಸಬುಕ್ ಗೆ ನಗ್ನ ವಿಡಿಯೋ ಹಾಕೋದಾಗಿ ಹೆದರಿಸುತ್ತಾನೆ. ಹೀಗಂತ ಗಿರಿನಗರ ಠಾಣೆಯಲ್ಲಿ ಯುವತಿ ದೂರು ದಾಖಲು ಮಾಡಿದ್ದಾಳೆ.