ಬೆಂಗಳೂರು : ಕ್ವಾರಂಟೈನ್ ನಲ್ಲಿರುವ ಮಹಿಳೆ ಓಡಾಟದ ಹಿನ್ನಲೆಯಲ್ಲಿ ಮೆಜೆಸ್ಟಿಕ್ ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಆತಂಕ ಶುರುವಾಗಿದೆ.
ಆಂಧ್ರದ ಅನಂತಪುರದಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆ ದೊಡ್ಡಬಳ್ಳಾಪುರಕ್ಕೆ ಹೋಗಲು ಮೆಜೆಸ್ಟಿಕ್ ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಓಡಾಟ ನಡೆಸಿದ್ದಾಳೆ. ಈ ಹಿನ್ನಲೆಯಲ್ಲಿ ಜನರಲ್ಲಿ ಕೊರೊನಾ ಸೋಂಕಿನ ಭಯ ಮನೆಮಾಡಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ಮಹಿಳೆಯ ವಿಚಾರಣೆ ನಡೆಸುತ್ತಿದ್ದಾರೆ. ಹಾಗೇ ಮಹಿಳೆಯನ್ನು ಮನೆಗೆ ಕಳಿಸಲು ಬಿಎಂಟಿಸಿ ಸಿಬ್ಬಂದಿ ವ್ಯವಸ್ಥೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಮಹಿಳೆಯ ಓಡಾಟ ಬಿಎಂಟಿಸಿ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗಿದೆ.