ಅಕ್ರಮ ಸಂಬಂಧ ಮುಂದುವರಿಸೋಕೆ ಗಂಡನೇ ಅಡ್ಡಿಯಾಗುತ್ತಾನೆ ಅಂತ ತಿಳಿದ ಪತ್ನಿಯೊಬ್ಬಳು ತನ್ನ ಗಂಡನನ್ನೇ ಕೊಲೆ ಮಾಡಿಸಿದ್ದಾಳೆ.
ಬಾಲಸುಬ್ರಹ್ಮಣ್ಯಂ (36) ಕೊಲೆಯಾದ ಪತಿಯಾಗಿದ್ದರೆ, ಈತನ ಪತ್ನಿ ರೇಣುಕಾ ಹಾಗೂ ಪ್ರಿಯಕರ ನಾಗಿರೆಡ್ಡಿ ಸೇರಿ ಸುಪಾರಿ ನೀಡಿ ಕೊಲೆ ಮಾಡಿಸಿದ್ದಾರೆ.
ಸುಪಾರಿ ನೀಡಿ ಲಾರಿಯಿಂದ ಬೈಕ್ ಗೆ ಡಿಕ್ಕಿ ಹೊಡೆಸಿ ಕೊಲೆ ಮಾಡಿರೋದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಆಂಧ್ರಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಪತ್ನಿ ರೇಣುಕಾ ಹಾಗೂ ಪ್ರಿಯಕರ ನಾಗಿರೆಡ್ಡಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.