ಬೆಂಗಳೂರು : ಪ್ರಶ್ನೆ : ನನ್ನದು ಲವ್ ಮ್ಯಾರೇಜ್. ಮದುವೆಯಾದ ಹೊಸತರಲ್ಲಿ ಎಲ್ಲವೂ ಉತ್ತಮವಾಗಿತ್ತು. ಆದರೆ ನಂತರ ನನ್ನ ಪತ್ನಿ ನನ್ನ ಪೋಷಕರ ಬಗ್ಗೆ ಕಮೆಂಟ್ ಮಾಡಲು ಶುರು ಮಾಡಿದ್ದಳು. ಮೊದಮೊದಲು ಈ ವಿಚಾರವನ್ನು ನಿರ್ಲಕ್ಷಿಸುತ್ತಿದೆ. ನಂತರ ಆಕೆಯನ್ನು ನಾನು ತುಂಬಾ ಪ್ರೀತಿಸುತ್ತಿದ್ದರಿಂದ ನನ್ನ ತಂದೆತಾಯಿ ಬಿಟ್ಟು ಬೇರೆ ವಾಸಿಸಲು ಪ್ರಾರಂಭಿಸಿದೆ. ಆದರೆ ನನ್ನ ಪತ್ನಿ ಆಕೆಯ ಸೋದರ ಸಂಬಂಧಿ ಮಹಿಳೆಯೊಬ್ಬಳ ಜೊತೆ ದೈಹಿಕ ಸಂಬಂಧವನ್ನು ಹೊಂದಿದ್ದಾಳೆ ಎಂಬುದು ನನಗೆ ತಿಳಿಯಿತು. ಆದರೆ ಈ ವಿಚಾರ ತಿಳಿದ ಮೇಲೆ ನನ್ನ ಮಗುವಿಗಾಗಿ ನಾನು ಆಕೆಯ ಜೊತೆ ಇದ್ದೇನೆ. ನಾನು ಮಾಡುತ್ತಿರುವುದು ನ್ಯಾಯಯುತವಾಗಿದೆ ಎಂದು ನನಗೆ ಅನಿಸುತ್ತಿಲ್ಲ, ಇದರಿಂದ ಆಕೆಯ ಜೊತೆ ಇರಲು ಆಗುತ್ತಿಲ್ಲ. ಏನು ಮಾಡಲಿ?
ಉತ್ತರ : ಮದುವೆ ಎಂದರೆ ಸಂಗಾತಿಗಳಿಬ್ಬರು ಪರಸ್ಪರರ ಅಗತ್ಯತೆ, ಭಾವನೆಗಳನ್ನು ಅರ್ಥಮಾಡಿಕೊಂಡು ತಮ್ಮ ಭಾವನೆಗಳನ್ನು ಅವರಿಗಾಗಿ ಬದಲಾಯಿಸಿಕೊಳ್ಳುವುದು. ಆದರೆ ಸಂಬಂಧದ ಬಿರುಕು ಉಂಟಾದಾಗ ನೀವು ಕೌನ್ಸಿಲಿಂಗ್ ಗೆ ಒಳಪಡುವುದು ಉತ್ತಮ ವೆಂದು ನಾನು ಸಲಹೆ ನೀಡುತ್ತೇನೆ. ಇಲ್ಲಿ ನೀವು ನಿಮ್ಮ ಭಾವನೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳುವುದು ಉತ್ತಮ. ಇದರಿಂದ ನಿಮ್ಮ ಆಸೆ, ನಿರಾಸೆಗಳನ್ನು ಪರಸ್ಪರ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅದಕ್ಕಾಗಿ ನೀವು ತಜ್ಞರ ಬಳಿ ಕೌನ್ಸಿಲಿಂಗ್ ತೆಗೆದುಕೊಂಡರೆ ಅವರು ನಿಮಗೆ ಸರಿಯಾದ ಮಾರ್ಗ ಸೂಚಿಸುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.