Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಡಿಸೆಂಬರ್ 1 ರಿಂದ ಕಾಲುವೆಗೆ ನೀರು ಹರಿಯೋದಿಲ್ಲ

ಡಿಸೆಂಬರ್ 1 ರಿಂದ ಕಾಲುವೆಗೆ ನೀರು ಹರಿಯೋದಿಲ್ಲ
ಕಲಬುರಗಿ , ಶುಕ್ರವಾರ, 30 ನವೆಂಬರ್ 2018 (19:01 IST)
ಹಿಂಗಾರು ಮಳೆಯು ಬಾರದೆ ಸಂಪೂರ್ಣ ಕೈಕೊಟ್ಟಿರುವುದರಿಂದ ಡಿ. 1ರಿಂದ ಕಾಲುವೆಗೆ ನೀರನ್ನು ಹರಿಸೋದನ್ನು ಸ್ಥಗಿತಗೊಳಿಸಲಾಗುತ್ತಿದೆ.

ಗಂಡೋರಿನಾಲಾ ಜಲಾಶಯದಲ್ಲಿ ಸಧ್ಯಕ್ಕೆ 1.320 ಟಿಎಂಸಿ ನೀರು ಲಭ್ಯವಿದೆ. ಈ ನೀರನ್ನು ಬೇಸಿಗೆವರೆಗೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಾಗಿದೆ. ಹಿಂಗಾರು ಮಳೆಯು ಬಾರದೆ ಸಂಪೂರ್ಣ ಕೈಕೊಟ್ಟಿರುವುದರಿಂದ ಅನಿವಾರ್ಯವಾಗಿ ಕಾಲುವೆ ನೀರನ್ನು 2018ರ ಡಿಸೆಂಬರ್ 1 ರಿಂದ ಸ್ಥಗಿತಗೊಳಿಸಲಾಗುತ್ತಿದೆ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ ಐಪಿಸಿ ವಿಭಾಗ ನಂ. 1ರ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.

      ಈ ವರ್ಷ ಮಳೆಯ ಅಭಾವ ಇದೆ. ಬೆಳೆ ಬೆಳೆಯಲು ಹಾಗೂ ದನಕರುಗಳಿಗೆ  ನೀರಿನ  ಅವಶ್ಯಕತೆಯಿದೆ. ಹೀಗಾಗಿ   ಗಂಡೋರಿನಾಲಾ ಯೋಜನೆಯಿಂದ 2018ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆಗಳಿಗೆ ಕಾಲುವೆ ಜಾಲದಲ್ಲಿ ನಡೆಯುತ್ತಿರುವ ಆಧುನೀಕರಣ ಕಾಮಗಾರಿಯನ್ನು ಸ್ಥಗಿತಗೊಳಿಸಿ ಮೇಲಾಧಿಕಾರಿಗಳ ಪರವಾನಿಗೆ ಪಡೆದು  ನವೆಂಬರ್ 7 ರಿಂದ ಕಾಲುವೆಯಲ್ಲಿ ನೀರು ಬಿಡಲಾಗಿದ್ದು, ರೈತರು ಈ ನೀರಿನ ಸದ್ಬಳಕೆ ಮಾಡಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ನ್ಯಾ.ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಒತ್ತಾಯ