ರಾಜ್ಯದ ಸಮ್ಮಿಶ್ರ ಸರಕಾರದ ಸಚಿವ ಸಂಪುಟ ವಿಸ್ತರಣೆಗೆ ದಿನಗಣನೇ ಆರಂಭಗೊಂಡಿರುವಂತೆ ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ, ಶಾಸಕರ ಒತ್ತಾಯ ತೀವ್ರವಾಗುತ್ತಿದೆ. ಹೀಗಾಗಿ ಅತೃಪ್ತರನ್ನು ಶಮನ ಮಾಡಲು ಡಾ.ಜಿ.ಪರಮೇಶ್ವರ ಪಕ್ಷದ ಸಚಿವರೊಂದಿಗೆ ಉಪಹಾರ ಕೂಟ ಏರ್ಪಡಿಸಿದ್ದರು.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಕಾಂಗ್ರೆಸ್ ಸಚಿವರೊಂದಿಗೆ ಉಪಹಾರ ಕೂಟ ನಡೆಸಿ, ರಾಜ್ಯದ ಆಗುಹೋಗುಗಳ ಕುರಿತು ಚರ್ಚೆ ನಡೆಸಿದರು. ಆ ಮೂಲಕ ಪಕ್ಷದಲ್ಲಿ ಉಂಟಾಗಿರುವ ಆಂತರಿಕ ಬೇಗುದಿ, ಅತೃಪ್ತಿಯನ್ನು ಶಮನ ಗೊಳಿಸುವ ಕೆಲಸವನ್ನೂ ಮಾಡಿದರು. ನಾವೆಲ್ಲರೂ ಒಂದಾಗಿ ಕೆಲಸ ಮಾಡುತ್ತಿದ್ದೇವೆ ಎಂಬ ಸಂದೇಶವನ್ನೂ ಹೈಕಮಾಂಡ್ ಗೆ ರವಾನಿಸುವ ಯತ್ನ ನಡೆಸಿದರು. ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆ ವಿಷಯ ಹಾದಿರಂಪವಾಗಿದೆ.
ಹೀಗಾಗಿ ಸರಕಾರಕ್ಕೆ ಸಂಕಷ್ಟ ತಂದೊಡ್ಡಲಿದೆ ಎಂಬ ವದಂತಿಗಳಿಗೆ ಉತ್ತರ ನೀಡಲು ತಮ್ಮ ನಿವಾಸದಲ್ಲಿ ಡಿಸಿಎಂ ಉಪಹಾರ ಕೂಟ ಏರ್ಪಡಿಸಿದ್ದರು ಎನ್ನಲಾಗಿದೆ. ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧಗೊಳ್ಳಬೇಕು. ಸಮ್ಮಿಶ್ರ ಸರಕಾರ ಪತನವಾಗದಂತೆ ಎಚ್ಚರವಹಿಸಲಾಗಿದೆ. ಸಚಿವರು ಹೊಂದಾಣಿಕೆಯಿಂದ ಕೆಲಸ ಮಾಡಬೇಕೆಂದು ಸೂಚನೆ ನೀಡಿದರು ಎನ್ನಲಾಗಿದೆ.