ಬೆಂಗಳೂರು : ಲಾಕ್ ಡೌನ್ ನಿಂದ ರಾಜ್ಯದ 4 ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂಬುದಾಗಿ ತಿಳಿದುಬಂದಿದೆ.
ಕೆಎಸ್ ಆರ್ ಟಿಸಿ, ಬಿಎಂಟಿಸಿ, ಎನ್ಇ ಕೆಎಸ್ ಆರ್ ಟಿಸಿ, ಎನ್ ಡಬ್ಲ್ಯೂ ಕೆಎಸ್ ಆರ್ ಟಿಸಿ ಗೆ ಸಂಕಷ್ಟ ಎದುರಾಗಿದ್ದು, ಈ ಬಾರಿ 1.25 ಲಕ್ಷ ನೌಕರರಿಗೆ ಸಂಬಳ ಸಿಗೋದು ಅನುಮಾನ ಎನ್ನಲಾಗಿದೆ.
ಈಗಾಗಲೇ ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿರುವ ಕೆಎಸ್ ಆರ್ ಟಿಸಿ ಸರ್ಕಾರ ಹಣ ಕೊಡದಿದ್ರೆ ಈ ತಿಂಗಳ ಸ್ಯಾಲರಿ ಕೊಡುವುದು ಅನುಮಾನ ಎನ್ನಲಾಗಿದೆ. ಆದಕಾರಣ ಸಂಬಳ ಸಿಗದ ಆತಂಕದಲ್ಲಿ ಲಕ್ಷಾಂತರ ಸಾರಿಗೆ ನೌಕರರು ಇದ್ದಾರೆ ಎನ್ನಲಾಗಿದೆ.