Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಪರಾಧಿಗಳ ಪತ್ತೆಯಲ್ಲಿ ರಾಜ್ಯವೇ ನಂಬರ್ ಒನ್- ರಾಮಲಿಂಗಾರೆಡ್ಡಿ

ಅಪರಾಧಿಗಳ ಪತ್ತೆಯಲ್ಲಿ ರಾಜ್ಯವೇ ನಂಬರ್ ಒನ್- ರಾಮಲಿಂಗಾರೆಡ್ಡಿ
ಬೆಂಗಳೂರು , ಸೋಮವಾರ, 4 ಡಿಸೆಂಬರ್ 2017 (21:34 IST)
ಕರ್ನಾಟಕದಲ್ಲಿ ಅಪರಾಧಗಳ ಸಂಖ್ಯೆ ಇಳಿಮುಖವಾಗಿದ್ದು, ಅಪರಾಧಿಗಳ ಪತ್ತೆಯಲ್ಲಿ ರಾಜ್ಯವು ದೇಶದಲ್ಲೇ ನಂಬರ್ ಒನ್ ಆಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ರಾಜ್ಯದ ಪೊಲೀಸರು ಶೇ 60 ರಷ್ಟು ಪ್ರಕರಣಗಳನ್ನು ಪತ್ತೆ ಹಚ್ಚುತ್ತಿದ್ದಾರೆ. ಇದು ರಾಷ್ಟ್ರೀಯ ಸರಾಸರಿಯಲ್ಲಿ ತನಿಖೆಯಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ ಎಂದಿದ್ದಾರೆ.

ಅಪರಾಧ ಪ್ರಕರಣಗಳಲ್ಲಿ ಗುಜರಾತ್ ರಾಜ್ಯ ಪ್ರಥಮ ಸ್ಥಾನದಲ್ಲಿದ್ದು, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಹಾಗೂ ರಾಜಸ್ಥಾನ ಕ್ರಮವಾಗಿ ಮೊದಲ ಎಂಟು ಸ್ಥಾನಗಳಲ್ಲಿದ್ದು, ನಂತರದ ಒಂಭತ್ತನೇ ಸ್ಥಾನದಲ್ಲಿ ಕರ್ನಾಟಕವಿದೆ ಎಂದು ತಿಳಿಸಿದ್ದಾರೆ.

2015ರಲ್ಲಿ ಕೊಲೆ, ಡಕಾಯಿತಿ, ರಾಬರಿ, ಕಳ್ಳತನದಂತಹ 13,958 ಪ್ರಕರಣಗಳು ದಾಖಲಾಗಿದ್ದರೆ, 4901 ಪ್ರಕರಣ ಪತ್ತೆ ಹಚ್ಚಲಾಗಿದೆ. 2016ರಲ್ಲಿ 13,341 ಪ್ರಕರಣಗಳಲ್ಲಿ 4056 ಪ್ರಕರಣ ಪತ್ತೆ ಮಾಡಲಾಗಿದೆ. 2017ರ ಅಕ್ಟೋಬರ್ ವರೆಗೆ 11,645 ಪ್ರಕರಣ ದಾಖಲಾಗಿದ್ದು, 2919 ಪ್ರಕರಣಗಳು ಪತ್ತೆಯಾಗಿವೆ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್, ಜೆಡಿಎಸ್‌ಗೆ ಪಾಠ ಕಲಿಸುವ ಸಮಯ ಬಂದಿದೆ: ಬಿಎಸ್‌ವೈ ವಾಗ್ದಾಳಿ