ರಾಜ್ಯ ಸರಕಾರ ಮರಳು ಮಾಫಿಯಾದ ಹಿಡಿತದಲ್ಲಿದೆ. ಬರಗಾಲ ನಿರ್ವಹಣೆಯಲ್ಲೂ ಸರಕಾರ ವಿಫಲವಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಆರೋಪಿಸಿದ್ದಾರೆ.
ಬರಗಾಲ ನಿರ್ವಹಣೆಯಲ್ಲಿ ವಿಫಲವಾಗಿದೆ ಸರಕಾರದ ವಿಮರ್ಶಕರೆ ಆರೋಪ ಮಾಡಿದ್ದಾರೆ. ಸರಕಾರ ಇನ್ನು ಮುಂದಾದರೂ ವಾಸ್ತವತೆಗೆ ಪೂರಕವಾಗಿರುವ ಅಂಕಿ ಅಂಶಗಳು ಕೊಡಲಿ ಎಂದು ಲೇವಡಿ ಮಾಡಿದರು.
ಮರಳು ಮಾಫಿಯಾದಲ್ಲಿ ಲೋಕೋಪಯೋಗಿ ಸಚಿವರ ಪುತ್ರನ ಹೆಸರು ಕೇಳಿಬಂದಿದೆ. ಆದರೆ, ಸರಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡಿತನದ ಸಂಗತಿಯಾಗಿದೆ ಎಂದು ಗುಡುಗಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನತೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.