ರಾಜ್ಯ ಸರ್ಕಾರ ಶೇ 10ರಷ್ಟು ಕಮಿಷನ್ ಪಡೆಯುವ ಸರ್ಕಾರವಲ್ಲ, ಅದಕ್ಕಿಂತಲೂ ಹೆಚ್ಚಿನ ಕಮಿಷನ್ ಪಡೆಯುವ ಸರ್ಕಾರ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ರಾಜಸ್ತಾನದ ಉದಯಪುರ ಮತ್ತು ಮೈಸೂರು ನಡುವಿನ ಹಮ್ ಸಫರ್ ರೈಲಿಗೆ ಚಾಲನೆ ನೀಡಿದ ನಂತರ ಮಹಾರಾಜ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನಾನು ಬೆಂಗಳೂರಿನಲ್ಲಿ ರಾಜ‌್ಯ ಸರ್ಕಾರ ಶೇ 10ರ ಕಮಿಷನ್ ಸರ್ಕಾರ ಎಂದು ಹೇಳಿದ್ದೆ. ಆದರೆ, ನನಗೆ ಅನೇಕರು ಸಂದೇಶ ಕಳಿಸಿ, ಕರೆಮಾಡಿ ಕಾಂಗ್ರೆಸ್ ಸರ್ಕಾರ ಶೇ10ಕ್ಕಿಂತ ಅಧಿಕ ಕಮಿಷನ್ ಪಡೆಯುತ್ತಿದೆ ಎಂದು ತಿಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವಷ್ಟು ದಿನ ಹೊಸ ರೀತಿಯ ಭ್ರಷ್ಟಾಚಾರಗಳು ಹೊರಗಡೆ ಬರುತ್ತಿವೆ. ಅಧಿಕಾರ ಇರುವಷ್ಟು ದಿನವೂ ರಾಜ್ಯವನ್ನು ಹಾಳು ಮಾಡುತ್ತಿದೆ. ದೇಶವನ್ನು ಮುನ್ನಡೆಸಲು ಬಿಜೆಪಿ ಸಿದ್ಧವಿದ್ದು, ಮುಂಬರುವ ಚುನಾವಣೆಯಲ್ಲಿ ಈ ಬಾರಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.