ಉತ್ತರ ಪ್ರದೇಶದ ಜಲೆನ್ ಜಿಲ್ಲೆಯಲ್ಲಿ ಪೆಟ್ರೋಲ್ ಪಂಪ್ ಅಟೆಂಡೆಂಟ್ 2000 ರೂಪಾಯಿ ನೋಟು ನೀಡಿ ಗ್ರಾಹಕರ ಸ್ಕೂಟರ್‌ನಿಂದ ಪೆಟ್ರೋಲ್ ವಾಪಸ್ ತೆಗೆದುಕೊಳ್ಳುತ್ತಿರುವ ಘಟನೆ ನಡೆದಿದೆ. ಪೆಟ್ರೋಲ್ ಬಂಕ್ನಲ್ಲಿ ಗ್ರಾಹಕರೊಬ್ಬರು 200 ರೂ. ಮೌಲ್ಯದ ಪೆಟ್ರೋಲನ್ನು ಬೈಕ್ಗೆ ಹಾಕಿಸಿ ಪೆಟ್ರೋಲ್ ಬಂಕ್ ಸಿಬ್ಬಂದಿಗೆ 2 ಸಾವಿರ ರೂಪಾಯಿ ಕೈಗಿತ್ತಿದ್ದಾರೆ. ಅದಕ್ಕೆ ಸಿಬ್ಬಂದಿ ಗಾಡಿಯಿಂದ 2000. ರೂಪಾಯಿ ಮೌಲ್ಯದ ಪೆಟ್ರೋಲ್ ಅನ್ನು ಹಿಂಪಡೆದು 2 ಸಾವಿರ ರೂಪಾಯಿ ವಾಪಸ್ ಕೊಟ್ಟು ಕಳುಹಿಸಿದ್ದಾರೆ. 200 ರೂಪಾಯಿ ಮೌಲ್ಯದ ಪೆಟ್ರೋಲ್ ಹಾಕಿಸಿ 2000 ರೂಪಾಯಿ ನೋಟು ಕೊಟ್ಟರೂ ಪಂಪ್ ಸಿಬ್ಬಂದಿ ಅದನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಸೆ.30ರವರೆಗೆ 2000 ನೋಟು ಚಲಾವಣೆಯಲ್ಲಿದೆ ಎಂದು ಯುವಕ ಬಂಕ್ ಸಿಬ್ಬಂದಿಗೆ ತಿಳಿಸಿದರೂ, ತಮ್ಮ ಬಳಿ ಚಿಲ್ಲರೆ ಇಲ್ಲ ಎಂದು ಹೇಳಿ ಬೈಕ್ನಿಂದ ಪೆಟ್ರೋಲ್ ಹಿಂದಕ್ಕೆ ತೆಗೆದಿದ್ದಾರೆ.